ಕುಸ್ತಿ ಪಂದ್ಯಾವಳಿ ಹಲವು ಶತಮಾನಗಳಿಂದ ದೇಶದ ಗ್ರಾಮೀಣ ಕ್ರೀಡೆಯಾಗಿದ್ದು, ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಸರಕಾರಿ ಪದವಿಪೂರ್ವ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ರಾಮರೂಢ ಮಠ, ಹತ್ತು ಜನಗಳ ಗರಡಿ ವತಿಯಿಂದ ಚಿತ್ರನಟ ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ನಡೆದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸ ಇರುವ ದೇಶಿ ಕುಸ್ತಿ ಪಂದ್ಯಾವಳಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆಸುವ ಮೂಲಕ ದೇಸಿ ಕಲೆಯನ್ನು ಉಳಿಸಬೇಕಿದೆ ಎಂದರು.
ಇಂದಿನ ಯುವಕರು ದೇಸೀಯ ಕ್ರೀಡೆ ಕುಸ್ತಿಗೆ ಆದ್ಯತೆ ನೀಡಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಸದೃಢ ದೇಹ ಸದೃಢ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಕುಸ್ತಿ, ಕ್ರೀಡೆ ಉಳಿಸುವ ಉದ್ದೇಶದಿಂದ ಮಳವಳ್ಳಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯದ ಮೊದಲನೇ ಬಹುಮಾನವನ್ನು ತನ್ನ ಟ್ರಸ್ಟ್ ವತಿಯಿಂದ ನೀಡಲಾಗುವುದು. ಜೊತೆಗೆ ಸರ್ಕಾರದಿಂದ ಕುಸ್ತಿ ಕ್ರೀಡೆಗೆ ಉತ್ತೇಜನ ನೀಡಲು ಪ್ರಯತ್ನಿಸುದಾಗಿ ತಿಳಿಸಿದರು.
ಮಾಜಿ ಸಚಿವ ಸೋಮಶೇಖರ್ ಮಾತನಾಡಿ, ಹಿಂದಿನಿಂದಲೂ ಕಸ್ತಿ ಪಂದ್ಯಾವಳಿಯನ್ನು ಮಳವಳ್ಳಿ ಯುವಕರು ನಡೆಸಿಕೊಂಡು ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ಪೀಳಿಗೆಗೂ ಕುಸ್ತಿಯ ಬಗ್ಗೆ ಆಸಕ್ತಿ ಬರುವಂತೆ, ಇನ್ನೂ ಹೆಚ್ಚಿನ ಪಂದ್ಯಾವಳಿಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯಲಿ ಎಂದು ಸಲಹೆ ನೀಡಿದರು.
ಶ್ರೀ ರಾಮರೂಢ ಮಠದ ವತಿಯಿಂದ ಸಚಿವರಿಗೆ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ, ಅಶೋಕ್, ಕೃಷ್ಣ, ಯಮದೂರು ಸಿದ್ದರಾಜು, ಬಸವರಾಜು, ನಾಗೇಗೌಡ, ಕುಮಾರ್, ಅಪ್ಪಾಜಿಗೌಡ, ಕಾರ್ಯಕ್ರಮ ಆಯೋಜಕರಾದ ರವಿ. ಮಂಜು, ಕಂಬರಾಜು ಸೇರಿದಂತೆ ಇತರರಿದ್ದರು.
ಇದನ್ನು ಓದಿ:ಕಾರ್ಪೊರೇಟ್ ಉದ್ಯಮಿಗಳ ಪರ ಮೋದಿ ಸರ್ಕಾರ!