Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕ್ರಿಶ್ಚಿಯನ್ ಬಾಂಧವರಿಂದ ಸಂಭ್ರಮದ ಕ್ರಿಸ್ ಮಸ್ ಆಚರಣೆ

ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ ಮಸ್ ಹಬ್ಬವನ್ನು ಮಂಡ್ಯದಲ್ಲಿ ಕ್ರಿಶ್ಚಿಯನ್ ಬಾಂಧವರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಕ್ರಿಸ್ ಮಸ್ ಅಂಗವಾಗಿ ಮಂಡ್ಯನಗರರ ಆರ್.ಪಿ.ರಸ್ತೆಯಲ್ಲಿರುವ ಸಾಡೇ ಚರ್ಚ್ ಹಾಗೂ ಮೈಷುಗರ್ ವೃತ್ತದ ಬಳಿ ಇರುವ ಚರ್ಚ್ ಗಳನ್ನು ಆಕರ್ಷಕ ವಿದ್ಯುತ್ ದೀಪಗಳಲ್ಲಿ ಅಲಂಕಾರ ಮಾಡಲಾಗಿತ್ತು, ಕ್ರಿಶ್ಚಿಯನ್ ಬಾಂಧವರು ಬೆಳಿಗ್ಗೆಯಿಂದ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ವರ್ಷಾಂತ್ಯದಲ್ಲಿ ಆಚರಿಸಲಾಗುವ ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರಿಗೆ ಪವಿತ್ರ ಹಬ್ಬವಾಗಿದ್ದು ಹೊಸ ವರ್ಷ ಸ್ವಾಗತಿಸುವ ಸಂಭ್ರಮದ ಆಚರಣೆಯಾಗಿದೆ. ಆದ್ದರಿಂದ ಒಂದಲ್ಲ ಒಂದು ಕಾರ್ಯಕ್ರಮಗಳ ಮೂಲಕ ವಾರ ಪೂರ್ತಿ ಈ ಹಬ್ಬದ ಆಚರಣೆಯು ನಡೆಯುತ್ತಿರುತ್ತದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳು ಹಾಗೂ ಭೋಜನಕೂಟಗಳು ಸಾಮಾನ್ಯವಾಗಿ ನಡೆಯುತ್ತವೆ. ಅಂತಿಮವಾಗಿ ಹೊಸ ವರ್ಷದ ಸ್ವಾಗತದೊಂದಿಗೆ ಕ್ರಿಸ್ ಮಸ್ ಮುಕ್ತಾಯವಾಗುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ