Wednesday, July 24, 2024

ಪ್ರಾಯೋಗಿಕ ಆವೃತ್ತಿ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಕದಲೂರು ಉದಯ್

ಕೊಟ್ಟ ಮಾತಿನಂತೆ ಕೆಲವೇ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಸಮಾಜ ಸೇವಕ ಕದಲೂರು ಉದಯ್ ಗ್ರಾಮದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮದ್ದೂರು ತಾಲೂಕಿನ ಭಾರತಿನಗರ ನಗರದ ಸಮೀಪದ ಮಠದದೊಡ್ಡಿಯಲ್ಲಿ ಇಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ 5 ಲಕ್ಷ ರೂ.ವೆಚ್ಚದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಯಮಿ ಕದಲೂರು ಉದಯ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಪರಿಸರ ಸಾಕಷ್ಟು ಕಲುಷಿತವಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗಿದೆ.ಕಲುಷಿತ ನೀರು ಕುಡಿಯುವುದರಿಂದ ಅನೇಕ‌ ರೋಗಗಳು ಬರುತ್ತವೆ.

ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂದದು ಸಣ್ಣಪುಟ್ಟ ರೋಗಗಳಿಗೂ ಮನುಷ್ಯ ತಡೆದುಕೊಳ್ಳದ ಸ್ಥಿತಿಯಲ್ಲಿ ಇದ್ದಾನೆ.ಹಾಗಾಗಿ ನಮ್ಮ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇವೆ ಎಂದರು.

ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವವಿರುತ್ತದೊ ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ನಮ್ಮ ಟ್ರಸ್ಟ್ ಕ್ರಮ ಕೈಗೊಂಡಿದೆ. ಜನತೆ ಇದರ ಉಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಮಾತನಾಡಿ,ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಕ್ಯಾನ್ ಗಳನ್ನು ಹಂಚಲಾಗಿದೆ. ಭೂಮಿಯ ಮೇಲೆ ವಾಸಿಸುವ ಪ್ರತಿ ಜೀವಿಗಳಿಗೆ ನೀರಿನ ಅತ್ಯವಶ್ಯಕವಾಗಿದ್ದು ಇಂದಿನ ದಿನಗಳಲ್ಲಿ ಶುದ್ದ ನೀರು ದೊರಕುವುದು ದುಸ್ತರವಾಗಿದೆ. ಅದ್ದರಿಂದ ನೀರನ್ನ ಸಮರ್ಪಕ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉದಯ್ ಅಭಿಮಾನಿಗಳ ಸಂಘಕ್ಕೆ ಚಾಲನೆ ನೀಡಲಾಯಿತು. ನಮ್ಮೂರಿನ ಯುವಕರು ಕದಲೂರು ಉದಯ್ ಅವರ ಹೆಸರಿನ ಸಂಘ ಸ್ಥಾಪಿಸಿ, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.ನಮ್ಮೂರಿನಲ್ಲಿ ಕುಡಿಯುವ ನೀರಿಗೆ ಅಭಾವವಿತ್ತು.ಇದನ್ನ ಅರಿತು ಉದಯ್ ಅವರು ಕೊಟ್ಟ ಮಾತಿನಂತೆ ಹತ್ತು ದಿನದೊಳಗೆ ನೀರಿನ ಘಟಕ ಸ್ಥಾಪಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಗ್ರಾಮದ ಯಜಮಾನರಾದ ನಾಡಗೌಡ ಚಿಕ್ಕರಾಜು ತಿಳಿಸಿದರು.

ನಮ್ಮೂರಿಗೆ ನೀರಿನ ಘಟಕ ಸ್ಥಾಪಿಸಿದ ಉದಯ್ ಅವರಿಗೆ ದೇವರು ಇನ್ನೂ ಹೆಚ್ಚು ಶಕ್ತಿ ನೀಡಿ,ಒಳ್ಳೆಯ ಕಾರ್ಯಗಳನ್ನು ಮಾಡಿಸಲಿ ಎಂದು ಗ್ರಾಮದ ದೊಡ್ಡ ಸಂಗ ಒಡೆಯರ್ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕದಲೂರು ರವಿ,ಕದಲೂರು ತಿಮ್ಮೇಗೌಡ, ಯತೀಶ್,ಶಿವು, ಕರಡಕೆರೆ ಮನು,ಅಣ್ಣೂರು ಹರೀಶ್ ಯಜಮಾನರುಗಳಾದ ಪುಟ್ಟಸ್ವಾಮಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!