Sunday, March 3, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಹುದ್ದೆಯಿಂದ ಪಿಎಸ್ಐ ಹುದ್ದೆವರೆಗೂ ರೇಟ್ ಫಿಕ್ಸ್

ಹೋಟೆಲ್ ನಲ್ಲಿ ಇಡ್ಲಿ, ವಡೆ, ದೋಸೆಗೆ ರೇಟ್ ಫಿಕ್ಸ್ ಮಾಡಿದಂತೆ ಸಿಎಂ ಹುದ್ದೆಯಿಂದ ಪಿಎಸ್ಐ ಹುದ್ದೆಯವರೆಗೂ ಬಿಜೆಪಿ ಸರ್ಕಾರದಲ್ಲಿ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಿಎಸ್ಐ ನೇಮಕಾತಿ ಹಗರಣದ ಹಿಂದಿರುವ ಎಲ್ಲರನ್ನೂ ಬಂಧಿಸಬೇಕು.ಅರಗ ಜ್ಞಾನೇಂದ್ರ ಅವರಿಗೆ ಅರ್ಧ ಜ್ಞಾನ ಇರೋದು. ಪೊಲೀಸ್ ಇಲಾಖೆ ನಡೆಸಲು ಅವರು ಲಾಯಕ್ ಅಲ್ಲ.

ಮೊದಲು ಅರಗ ಜ್ಞಾನೇಂದ್ರರಿಂದ ಬಿಜೆಪಿ ರಾಜೀನಾಮೆ ಪಡೆಯಬೇಕು. ಬಿಜೆಪಿ ಎಂದರೆ ಬೆಲೆ ಏರಿಕೆ, ಭ್ರಷ್ಟಾಚಾರ ಎಂಬಂತಾಗಿದೆ ಪ್ರತಿ ಹೆಜ್ಜೆಗೂ ರೇಟ್ ಫಿಕ್ಸ್ ಮಾಡಲಾಗಿದೆ. ಬಿಜೆಪಿ ಸರ್ಕಾರ ಒಂದು ಪ್ರೈಸ್ ಕಾರ್ಡ್ ಬಿಟ್ಟಿದೆ. ಹೋಟೆಲ್ ನಲ್ಲಿ ಇಡ್ಲಿ,ವಡೆ ದೋಸೆಗೆ ರೇಟ್ ಫಿಕ್ಸ್ ಮಾಡಿರುವಂತೆ, ಮುಖ್ಯಮಂತ್ರಿ ಚೇರ್ ನಿಂದ, ಮಂತ್ರಿ ಚೇರು, PSI ಚೇರ್ ವರೆಗೂ ಬಿಜೆಪಿ ರೇಟ್ ಫಿಕ್ಸ್ ಮಾಡಿದೆ. ಇದೊಂದು ಕಡು ಭ್ರಷ್ಟ ಸರ್ಕಾರ ಎಂದು ವ್ಯಂಗ್ಯವಾಡಿದರು.

ಕೋವಿಡ್ ನಿಂದ ದೇಶದಲ್ಲಿ 47 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ನರೇಂದ್ರ ಮೋದಿ ಸರ್ಕಾರ ಪರಿಹಾರ ಕೊಡಬೇಕೆನ್ನುವ ಕಾರಣಕ್ಕೆ ನಿಜವಾದ ಸಂಖ್ಯೆಯನ್ನು ಮುಚ್ಚಿಟ್ಟು ಪರಿಹಾರ ನೀಡದೆ ಜನರನ್ನು ಬೀದಿಗೆ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡ ಕೋವಿಡ್ ಸಾವುಗಳನ್ನು ಮರೆಮಾಚಿದೆ. ಕೋವಿಡ್ ಬಂದರೆ ಬಿಜೆಪಿ ಸರ್ಕಾರ ಖುಷಿಪಡುತ್ತದೆ. ಬೆಡ್,ಆಕ್ಸಿಜನ್,ಮಾಸ್ಕ್,ಔಷಧಿ ಎಲ್ಲದರಿಂದಲೂ ಲೂಟಿ ಮಾಡಿದೆ ಎಂದು ಕಿಡಿಕಾರಿದರು.

ರಕ್ಷ ರಾಮಯ್ಯ ಅವರ ಅವಧಿ ಮುಗಿದು,ಅವರು ರಾಷ್ಟ್ರೀಯ ಸಂಘಟನೆಯಲ್ಲಿದ್ದಾರೆ. ರಕ್ಷಾ ರಾಮಯ್ಯ, ನಾನು ಬಾಲ್ಯ ಸ್ನೇಹಿತರಾಗಿದ್ದು, ಜೊತೆಯಲ್ಲೆ ಓದಿಕೊಂಡು ಬಂದವರು.ನಮ್ಮಲ್ಲಿ ಯಾವ ಬಣವೂ ಇಲ್ಲ. ನಾವೆಲ್ಲ ಜೊತೆಯಲ್ಲೆ ಇದ್ದೀವಿ.ನಮ್ಮದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದರು.

ಎಂ.ಬಿ. ಪಾಟೀಲ್ ಹಾಗೂ ಅಶ್ವಥ್ ನಾರಾಯಣ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ. ದೊಡ್ಡವರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಕೈ ಮುಗಿದ ಅವರಿಬ್ಬರ ವಿಚಾರ ನನಗೇನು ಗೊತ್ತಿಲ್ಲ. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷ. ಪಕ್ಷದ ಬಾವುಟ ಕಟ್ಟೋದು, ಹೋರಾಟದ ಬಗ್ಗೆ ಪ್ರಶ್ನೆ ಕೇಳಿ ಎಂದು ಜಾರಿ ಕೊಂಡರು.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ರೂ ಅವರಿಗೆ ಶಿಕ್ಷೆ ಆಗಲೇ ಬೇಕು‌. ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣ ತಪ್ಪು ಮಾಡಿದ್ದರೆ ಬಂಧಿಸಲಿ. ನಾನಾಗಲೀ,ಡಿ.ಕೆ.ಶಿವಕುಮಾರ್ ಆಗಲಿ ತಪ್ಪು ಮಾಡಿದ್ದರೆ ನಮ್ಮನ್ನು ಬಂಧಿಸಲಿ. ಹಗರಣದಲ್ಲಿ ರಾಜೀ ಮಾತೇ ಇಲ್ಲ. ನಾವು ಭ್ರಷ್ಟಚಾರದ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ಕಾನೂನು ಎಲ್ಲರಿಗೂ ಒಂದೇ ಎಂದರು.

ಪಿಎಸ್ಐ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಎಂಪಿ, ಎಂಎಲ್‌ಎ, ಮಂತ್ರಿಗಳನ್ನು ಬಂಧಿಸಬೇಕು.ಇಂತಹ ವಿಚಾರಗಳಲ್ಲಿ ನಾನೂ ತಪ್ಪು ಮಾಡಿದ್ರೆ ನನ್ನನ್ನು ಕೂಡ ಅರೆಸ್ಟ್ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡರಾದ ಗಣಿಗ ರವಿ ಕುಮಾರ್, ಐಶ್ವರ್ಯ ಮಹದೇವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್,ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ರುದ್ರಪ್ಪ, ರಶ್ಮಿ ಶಿವಕುಮಾರ್, ನಗರಸಭಾ ಸದಸ್ಯ ನಯೀಂ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!