Monday, September 16, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕಾಮನ್ ಸಾಪ್ಟ್ ವೇರ್ ಉಪಯುಕ್ತತೆ ಕುರಿತು ಜಾಗೃತಿ ಸಭೆ

ರಾಷ್ಟ್ರೀಯ ಹೈನುಗಾರಿಕೆ ಮಹಾ ಮಂಡಳಿಯು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಸಹಕಾರಿಯಾಗುವ ನಿಟ್ಟಿನಲ್ಲಿ ಅಭಿವೃದ್ದಿ ಪಡಿಸಿರುವ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ ನ ಉಪಯುಕ್ತತೆ ಕುರಿತು ಸಂಘಟನೆಗಳ ಪ್ರಮುಖರಿಗೆ ಮಾಹಿತಿ ನೀಡಲು ಮದ್ದೂರು ತಾಲ್ಲೂಕಿನ ಕೊಪ್ಪದ ಶ್ರೀಯಾಂಬರ್ಜಿಯರ್ ಮಠದಲ್ಲಿ ಜು.22ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಯ ಸಂಚಾಲಕ ಸಿ.ಎಂ.ಕ್ರಾಂತಿಸಿಂಹ ತಿಳಿಸಿದ್ದಾರೆ

ರಾಜ್ಯದ್ಯಾಂತ ಜಾರಿಗೆ ಬಂದಿರುವ ಕಾಮನ್ ಸಾಪ್ಟ್ ವೇರ್ ಬಳಸಿ ಆಟೊಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ ನಡಿ ಹಾಲು ಸಂಗ್ರಹ ಹಾಗೂ ಹಾಲಿನ ಲೆಕ್ಕ ನಿರ್ವಹಣೆ ಪದ್ದತಿಯನ್ನು ಆನ್ ಲೈನ್ ವ್ಯವಸ್ಥೆಯಡಿ ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ ತರಲು ಮುಂದಾಗಿರುವ ಮನ್ ಮುಲ್ ಕ್ರಮದ ಹಿನ್ನಲೆಯಲ್ಲಿ ಈ ಸಭೆ ಏರ್ಪಡಿಸಿರುವುದಾಗಿ ಸಿ.ಎಂ.ಕ್ರಾಂತಿಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ಗೋವಿನಿಂದ ಗ್ರಾಹಕರವರೆಗೆ ಶುದ್ದತೆ ಮತ್ತು ಗುಣಮಟ್ಟದ ಖಾತರಿ ಯೊಂದಿಗೆ ಗ್ರಾಹಕರ ಮನಗೆದ್ದಿರುವ ನಂದಿನಿ ಬ್ರಾಂಡ್ ಹೆಸರಿನ ಕೆಎಂಎಫ್ ಉತ್ಪನ್ನಗಳು ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆ ಎದುರಿಸಿ ಮತ್ತಷ್ಠು ಸುಸ್ಥಿರತೆ ಸಾಧಿಸುವಲ್ಲಿ ನೂತನ ಕ್ರಮಗಳು ಹಾಗೂ ಗುಣಮಟ್ಟ ನಿರಂತರತೆ ಕಾಯ್ದುಕ್ಕೊಳ್ಳುವ ಅಗತ್ಯ ಇದೆ ಎಂದಿದ್ದಾರೆ.

ಯಾವುದೇ ನೂತನ ಪದ್ದತಿ ಜಾರಿಗೆ ಬಂದಾಗ ಅದರ ಸಾಧಕ ಬಾಧಕ ಕುರಿತು ಚರ್ಚೆಗಳು ನಡೆಯುವುದು ಸಹಜ ಇಂತಹ ಚರ್ಚೆಗಳಿಗೆ ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಪರಿಹಾರ ಕಂಡುಕೊಂಡು ನೂತನ ವ್ಯವಸ್ಥೆಗೆ ಪೂರಕ ವಾತವರಣ ಸೃಷ್ಠಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಈ ಸಭೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೆಶಕರು ಮತ್ತು ಸಹಕಾರಿ ಬಂಧುಗಳು, ಮಹಿಳಾ, ಸ್ತ್ರೀ ಶಕ್ತಿ ಸಂಘಗಳ ಮುಖ್ಯಸ್ಥರು, ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ರೈತ ಸಂಘಟನೆ, ದಲಿತ ಸಂಘಟನೆ, ಕನ್ನಡಪರ ಸಂಘಟನೆ ಹಾಗೂ ಹಾಲು ಉತ್ಪಾದಕರು ಮತ್ತು ಪ್ರಗತಿಪರರು ಹಾಲಿನ ಡೇರಿ ಅಭಿವೃದ್ಧಿ ಪರರು ಆಗಮಿಸಿ ಕಾಮನ್ ಸಾಪ್ಟ್ವೇರ್ ಬಳಕೆ ಮತ್ತು ಉಪಯುಕ್ತತೆ ಕುರಿತು ತಿಳಿದುಕ್ಕೊಳ್ಳಬೇಕೆಂದು ಅವರು ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!