Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕೋಮುವಾದಿಗಳ ವಿರುದ್ಧ ಶೋಷಿತರು ಒಗ್ಗೂಡಿ ಹೋರಾಟ ನಡೆಸಲು ಸಿದ್ದರಾಮಯ್ಯ ಕರೆ

ಎಲ್ಲ ಶೋಷಿತ ವರ್ಗಗಳು, ಅವಕಾಶ ವಂಚಿತ ವರ್ಗಗಳು, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಜನ ಒಗ್ಗೂಡಿ ಇಂದಿನ ಕೋಮುವಾದಿ ಸರ್ಕಾರಗಳ ವಿರುದ್ಧ ಒಗ್ಗೂಡಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೋಷಿತ ಸಮುದಾಯಗಳಿಗೆ ಕರೆ ನೀಡಿದರು.

“>

ಚಿತ್ರದುರ್ಗದಲ್ಲಿ ಭಾನುವಾರ ನಡೆದ ಬೃಹತ್ ದಲಿತರ ಐಕ್ಯತಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಯಾವತ್ತಿಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ, ಬದ್ಧತೆ ಹೊಂದಿರುವ ಇರುವ ಪಕ್ಷವಾಗಿದೆ. ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಹಾಗೂ ಬದ್ಧತೆ ಇಲ್ಲದ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ಚುನಾವಣೆ ಸಮೀಪಿಸಿದಾಗ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಮೀಸಲಾತಿ ಹೆಚ್ಚಳ ವಿಚಾರ ಸರ್ಕಾರ ಜನವರಿ 31ರ ಒಳಗಾಗಿ ಸಂವಿಧಾನ ತಿದ್ದುಪಡಿ ತಂದು 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

SC, ST ಸಮುದಾಯಗಳ ಒಟ್ಟಾರೆ ಕಲ್ಯಾಣಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷವು ಇಂದು ಚಿತ್ರದುರ್ಗದ ಐಕ್ಯತಾ ಸಮಾವೇಶದಲ್ಲಿ 10 ಘೋಷಣೆಗಳನ್ನು ಮಾಡಿದೆ. ಇದು ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳಿಗೆ ನಮ್ಮ ಭರವಸೆಗಳಾಗಿದೆ. ಕಾಂಗ್ರೆಸ್ ಶೋಷಿತರ ಪರ ನಿಲ್ಲುತ್ತದೆ, ಹೋರಾಡುತ್ತದೆ ಮತ್ತು ಸಮುದಾಯಗಳ ಭರವಸೆಗಳನ್ನು ಈಡೇರಿಸುತ್ತದೆ ಎಂದು ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!