Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವ ಛಾಯಾಗ್ರಹಣ ದಿನ; ಛಾಯಾಗ್ರಾಹಕ ವೇಣುಗೋಪಾಲ್ ಗೆ ಅಭಿನಂದನೆ

”ವಿಶ್ವ ಛಾಯಾಗ್ರಹಣ ದಿನ”ದ ಅಂಗವಾಗಿ, ಕರ್ನಾಟಕ ಸಂಘದ ಆವರಣದಲ್ಲಿ, ಮಂಡ್ಯದ ಹಿರಿಯ ಛಾಯಾಗ್ರಾಹಕ ವೇಣುಗೋಪಾಲ್ (ಪ್ರೆಸ್ ಫೋಟೋ ವೇಣು)ರವರನ್ನು ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ, ವಲಯಾಧ್ಯಕ್ಷ ಲಯನ್ ಜಿ ಧನಂಜಯ ದರಸಗುಪ್ಪೆ ಮಾತನಾಡಿ, 1939 ಆಗಸ್ಟ್ 19ರಂದು ಮೊದಲ ಬಾರಿಗೆ ‘ವಿಶ್ವ ಛಾಯಾಗ್ರಹಣ ದಿನ’ವನ್ನು ಫ್ರಾನ್ಸ್ ದೇಶದಲ್ಲಿ ಆಚರಿಸಲಾಯಿತು. ನಂತರ ಇದರ ಮಹತ್ವವನ್ನು ಅರಿತ ಇತರೆ ದೇಶಗಳು ಕೂಡ ಈ ದಿನವನ್ನು ಆಚರಣೆ ಮಾಡುತ್ತಿದ್ದು, ನಮ್ಮ ದೇಶದಲ್ಲಿ 2020 ರಿಂದ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಕಳೆದ 48 ವರ್ಷಗಳಿಂದಲೂ (06 -06-1976ರಿಂದ)ನಿರಂತರವಾಗಿ ವೃತ್ತಿಪರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ವೇಣುಗೋಪಾಲ್ ರವರು ಈ ಸನ್ಮಾನಕ್ಕೆ ಅಭಿನಂದಾರ್ಹರು ಎಂದರು.

ಲಯನ್ ಜಿಲ್ಲೆ 317 ಜಿ ರ ಅಡ್ವೈಸರ್ ಹಾಗೂ ಮಾಜಿ ಜಿಲ್ಲಾ ರಾಜ್ಯಪಾಲ ಲಯನ್. ಕೆದೇವೇಗೌಡ, ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಜಿ.ಎ. ರಮೇಶ್, ಎರಡನೇ ಉಪ ರಾಜ್ಯಪಾಲ ಲಯನ್ ಕೆ ಎಲ್ ರಾಜಶೇಖರ, ಜಿಲ್ಲಾ ಅಂಬಾ ಸಡರ್ ಲಯನ್ ಆನಂದ್, ಜಿಇಟಿ ಕೋ-ಆರ್ಡಿನೇಟರ್ ಲಯನ್ ಹನುಮಂತಯ್ಯ,ಜಿ ಎಸ್ ಟಿ ಲ ಹರ್ಷ,ಪಿಎಸ್‌ಟಿ ಫೋರಂ ನ ಅಧ್ಯಕ್ಷರಾದ ಲಯನ್.ಮತಿದೇವ ಕುಮಾರ್,ಲಯನ್ ಚಿಕ್ಕಸ್ವಾಮಿ (ಒಡನಾಡಿ), ನಾಲ್ವಡಿ ಲಯನ್ಸ್ ಕ್ಲಬ್ಬಿನ ಲಯನ್ ಕೆ.ಶಿವಲಿಂಗಯ್ಯ, ಲಯನ್ ಶಿವಲಿಂಗೇಗೌಡ, ಲಯನ್ ಲಿಂಗೇಗೌಡ,ಲಯನ್ ಶೇಖರ್(ಬೆಳಕು ),ಲಯನ್ ಕೃಷ್ಣೆಗೌಡ(ಸಾಹಿತ್ಯ )ಲಯನ್ ಶಿವಲಿಂಗಯ್ಯ(ಮಂಡ್ಯ)ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!