Thursday, July 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮುಡಾ ಅಧ್ಯಕ್ಷ ನಹೀಂಗೆ ಬಿಜೆಪಿ ಮುಖಂಡ ಬೋಹ್ರಾ ಅಭಿನಂದನೆ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಹೀಂ ಅವರನ್ನು ಕೇಂದ್ರ ವಖ್ಫ್ ಕೌನ್ಸಿಲ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ.ಅಬ್ಬಾಸ್ ಅಲಿ ಬೋಹ್ರಾ ಅಭಿನಂದಿಸಿದರು.

ನಂತರ ಮಾತನಾಡಿದ ಅವರು ಮುಡಾಕ್ಕೆ ಯುವಕ ನಹೀಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ ಎಂದು  ಅವರಿಗೆ ಶುಭಾಶಯ ಕೋರಿದರು.

ಇಲ್ಲಿಯತನಕ ಮುಡಾಕ್ಕೆ ಯುವಶಕ್ತಿ ಅಧ್ಯಕ್ಷರಾಗಿರಲಿಲ್ಲ ಯುವಶಕ್ತಿಯನ್ನ ಬಳಸಿಕೊಂಡು ಮಂಡ್ಯ ನಗರ ಅಭಿವೃದ್ಧಿ ಹೊಂದಲು ಮಂಡ್ಯ ಜನರು ಅವರಿಗೆ ಸಹಕಾರ, ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸಲೀಮ್ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!