Thursday, July 25, 2024

ಪ್ರಾಯೋಗಿಕ ಆವೃತ್ತಿ

ನೀಟ್ ಅಕ್ರಮ| ಎನ್‌ಟಿಎ ಕಚೇರಿ ಮೇಲೆ ಕಾಂಗ್ರೆಸ್ ವಿದ್ಯಾರ್ಥಿ ಘಟಕ ದಾಳಿ; ಬೀಗ ಜಡಿದು ಪ್ರತಿಭಟನೆ

ನೀಟ್ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳು ನಡೆದಿರುವ ಹಿನ್ನೆಲೆ ಸುಮಾರು 100ಕ್ಕೂ ಹೆಚ್ಚು ಕಾಂಗ್ರೆಸ್‌ ರಾಷ್ಟ್ರೀಯ ವಿದ್ಯಾರ್ಥಿ ಘಟಕ ನವದೆಹಲಿಯ ರಾಷ್ಟ್ರೀಯ ಪರೀಕ್ಷಾ ಮಂಡಳಿ ಕಚೇರಿಯ ಪರೀಕ್ಷಾ ವಿಭಾಗಕ್ಕೆ ದಾಳಿ ನಡೆಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿರುವಂತೆ ವಿದ್ಯಾರ್ಥಿಗಳ ಗುಂಪು ಘೋಷಣೆಗಳನ್ನು ಕೂಗುತ್ತ ಎನ್‌ಟಿಎ ಕಚೇರಿಗೆ ದಾಳಿ ನಡೆಸಿದ್ದಾರೆ. ಅಧಿಕೃತ ಪಡಿಸದ ಕೆಲವು ವರದಿಗಳಂತೆ ಕೆಲವು ಪ್ರತಿಭಟನಾಕಾರರು ಕಚೇರಿಗೆ ಹೊರಗಡೆಯಿಂದ ಬೀಗ ಜಡಿದಿದ್ದಾರೆ ಎನ್ನಲಾಗಿದೆ. ನಂತರ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇ ತಿಂಗಳಲ್ಲಿ ದೇಶಾದ್ಯಂತ ಸುಮಾರು 24 ಲಕ್ಷ ಮಂದಿ ಬರೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಹಲವರು ಅಕ್ರಮವಾಗಿ ಉತ್ತೀರ್ಣರಾಗಿದ್ದರು. ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಈಗಾಗಲೇ ಬಿಹಾರ, ಮಹಾರಾಷ್ಟ್ರ ಹಾಗೂ ದೆಹಲಿಯಿಂದ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ.

ಕೃಪಾಂಕ ನೀಡಿದ್ದ 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಕೇವಲ 700 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದು, ಜುಲೈ 8 ರಂದು ಪ್ರಕರಣವು ವಿಚಾರಣೆಗೆ ಬರಲಿದೆ.

ಒಂದೇ ಕೋಚಿಂಗ್‌ ಕೇಂದ್ರದಲ್ಲಿದ್ದ 6 ಮಂದಿ ಸೇರಿ 67 ವಿದ್ಯಾರ್ಥಿಗಳು ಅತ್ಯಂತ ಹೆಚ್ಚು ಅಂಕ ಗಳಿಸಿದ್ದರು.  ಕೃಪಾಂಕವನ್ನು ರದ್ದುಪಡಿಸಿದ ನಂತರ ವಿದ್ಯಾರ್ಥಿಗಳು ಹಲವರು ರ್ಯಾಂಕ್‌ ದರ್ಜೆಯನ್ನು ಕಳೆದುಕೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!