Thursday, April 25, 2024

ಪ್ರಾಯೋಗಿಕ ಆವೃತ್ತಿ

ಗುಜರಾತ್‌ನಲ್ಲಿ ₹500 ನೋಟಿನ ಸುರಿಮಳೆ

ಸೋದರಳಿಯನ ಮದುವೆಯ ಸಂಭ್ರಮದಲ್ಲಿದ್ದ ಮಾವನೊಬ್ಬ ಮನೆಯ ಮೇಲಿಂದ ಹಣದ ಸುರಿಮಳೆಗೈದಿರುವ ಘಟನೆ ಗುಜರಾತಿನ ಮೆಹ್ವಾನದಲ್ಲಿ ನಡೆದಿದೆ.

ಕಳೆದ ತಿಂಗಳು ಬೆಂಗಳೂರಿನ ಕೆ ಆರ್ ಮಾರ್ಕೆಟ್‌ನ ಫೈಓವರ್‌ನಲ್ಲಿ ವ್ಯಕ್ತಿಯೊಬ್ಬ 10 ಮುಖಬೆಲೆಯ ನೋಟುಗಳನ್ನು ಎಸೆದು ಭಾರೀ ಸದ್ದು ಮಾಡಿದ್ದ. ಅದರ ಬೆನ್ನಲ್ಲೇ ಅಂತಹದ್ದೇ ಘಟನೆಗೆ ಇದೀಗ ಗುಜರಾತ್ ಸಹ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನೊಬ್ಬ ಕರೀಂ ಜಾಧವ್ ತನ್ನ ಸಂಬಂಧಿ ರಜಾಕ್‌ನ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆಯ ಮೇಲಿಂದ ನೋಟುಗಳನ್ನು ಸುರಿದಿದ್ದಾನೆ.

ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ, ಹಣದ ಹೊಳೆ ಹರಿಸಿದ್ದಾರೆ. ಆತ ಎಸೆದ ನೋಟುಗಳನ್ನು ಬಾಚಿಕೊಳ್ಳಲು ನೂರಾರು ಮಂದಿ ಮುಗಿಬಿದ್ದಿದ್ದಾರೆ. ಕರೀಂ ಜಾಧವ್ ಮತ್ತು ಆತನ ಕುಟುಂಬಸ್ಥರು ಮನೆಯ ಮೇಲಿಂದ ನೋಟು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮನೆಯ ಮೇಲಿಂದ 500 ಮುಖಬೆಲೆಯ ನೋಟುಗಳಲ್ಲಿ ಎಸೆದಿರುವುದು ಸೆರೆಯಾಗಿದೆ. ಕೆಳಗಿದ್ದ ಜನರು ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದರು. ನೋಟುಗಳನ್ನು ತೆಗೆದುಕೊಳ್ಳುತ್ತಿರುವಾಗ ಜೋಧಾ ಅಕ್ಬರ್ ಚಿತ್ರದ “ಅಜೀಂ-ಓ-ಶಾನ್ ಶೆಹೆನ್‌ಶಾ” ಎಂಬ ಬಾಲಿವುಡ್ ಹಾಡು ಬರುತ್ತಿತ್ತು.

ಕಳೆದ ತಿಂಗಳಷ್ಟೇ ಬೆಂಗಳೂರಿನಲ್ಲಿ ಇಂತಹದೊಂದು ಸುದ್ದಿ ಭಾರೀ ದೊಡ್ಡ ಸದ್ದು ಮಾಡಿತ್ತು. ನಗರದ ಕೆ ಆರ್ ಮಾರ್ಕೆಟ್‌ನ ಫೈಓವರ್ ಮೇಲೆ ನಿಂತು ವ್ಯಕ್ತಿಯೊಬ್ಬ ಪ್ರಚಾರದ ಗಿಮಿಕ್ ಸಲುವಾಗಿ ಹತ್ತು ರೂಪಾಯಿ ಮುಖ ಬೆಲೆಯ ನೋಟು ಎಸೆದಿದ್ದ. ಆ ಬಳಿಕ ನೋಟು ಎಸೆದಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!