Wednesday, September 18, 2024

ಪ್ರಾಯೋಗಿಕ ಆವೃತ್ತಿ

”ಕುಕ್ಕರ್ ಬಾಂಬ್ ಸ್ಪೋಟದ ತನಿಖೆಗೆ NIA-CBI ಬರುತ್ತೆ, ಆದ್ರೆ ಸ್ವಾಮೀಜಿ ಮಾಡಿದ ಅತ್ಯಾಚಾರ ತನಿಖೆಗೆ ಬರಲ್ಲ ಅನ್ನುತ್ತೇ…!

”ಎಲ್ಲೋ ಕುಕ್ಕರ್ ಬಾಂಬ್ ಸ್ಪೋಟವಾದ್ರೆ ಸೆಂಟ್ರಲ್ ನಿಂದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ( National Investigation Agency) ಹಾಗೂ ಕೇಂದ್ರೀಯ ತನಿಖಾ ದಳ (Central Bureau of Investigation)ಗಳು ಬರ್‍ತಾವೆ… ಆದ್ರೆ ಕಳೆದ 25 ವರ್ಷಗಳಿಂದ ಮುಗ್ದ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ  ಪ್ರಭಾವಿ (ಮುರುಘಮಠದ ಶಿವಯೋಗಿ ಶರಣರು) ಸ್ವಾಮೀಜಿಯೊಬ್ಬರ ಮೇಲಿನ ತನಿಖೆಗೆ ಬರಲ್ಲ..ಬರಲ್ಲ…ಅನ್ನುತ್ತೇ…ಎಂದು ಒಡನಾಡಿ ಸಂಸ್ಥೆಯ ಪರಶುರಾಮ್ ವ್ಯಂಗ್ಯವಾಡಿದರು.

ಮಂಡ್ಯದ ಸರ್ಕಾರಿ ಬಾಲಕಿಯರ ಕಾಲೇಜು(ಕಲ್ಲು ಕಟ್ಟಡ)ವಿನಲ್ಲಿ ಶನಿವಾರ ನಡೆದ ”ಅತ್ಯಾಚಾರ ವಿರೋಧಿ ಆಂದೋಲನದ ಹಕ್ಕೊತ್ತಾಯ” ಸಮಾವೇಶದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.

ನಿಮ್ಮ ಮಕ್ಕಳು ಅತ್ಯಾಚಾರಿಗಳಾಗದಂತೆ ಎಚ್ಚರ ವಹಿಸಿ : ಒಡನಾಡಿ ಸ್ಟ್ಯಾನ್ಲಿ

ಒಂದು ಸಣ್ಣ ಬಾಂಬ್ ಸ್ಪೋಟಕ್ಕೆ ತನಿಖೆಗೆ ಇಳಿಯುವ ಕೇಂದ್ರದ ತನಿಖಾ ಸಂಸ್ಥೆಗಳು ದೊಡ್ಡ ಅತ್ಯಾಚಾರ ಪ್ರಕರಣವೊಂದರ ತನಿಖೆಗೆ ಏಕೆ ಬರುವುದಿಲ್ಲ ? ” ಬೇಟಿ ಪಡಾವೋ ಬೇಟಿ ಪಡಾವೋ” ಎಂದು ಪ್ರಚಾರ ಪಡೆದು ಪಡೆದುಕೊಳ್ಳುವ ಪ್ರಧಾನಿಗಳಿಗೂ ಈ ಪ್ರಕರಣನ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಜಾಲತಾಳಗಳಲ್ಲಿ ”ಟ್ಯಾಗ್ ” ಮಾಡಿದದೂ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ, ಇಷ್ಟೇ ಅಲ್ಲದೇ ರಾಷ್ಟ್ರಪತಿಗಳಿಗೆ ತನಿಖೆ ನಡೆಸುವಂತೆ ಮನವಿ ಮಾಡಿದರೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ ಎಂದರೆ, ನಾವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ ಎಂದು ತಿಳಿದು ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳನ್ನು ಎತ್ತಾಕ್ಕೊಂಡೋಗೋಕೆ ಮಹಿಳಾ ಪೊಲೀಸರೇ ಬಂದಿದ್ರು

ಸ್ವಾಮೀಜಿಯ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ 10 ಮುಗ್ದ ಹೆಣ್ಣು ಮಕ್ಕಳನ್ನು ಎತ್ತಾಕ್ಕೊಡೊಂಗೋಕೆ ಮಹಿಳಾ ಪೊಲೀಸರೇ ಬಂದಿದ್ರು, ಅದೃಷ್ಟವಶಾತ್ ಅವರ ಕೈಗೆ ಮಕ್ಕಳು ಸಿಗಲಿಲ್ಲ, ”ಅವರಿಗೆ (ಮಹಿಳಾ ಪೊಲೀಸರು) ಸ್ವಾಮೀಜಿಯ ಮೇಲೆ ಬೇಜಾರಿಲ್ಲ, ಆದ್ರೆ ಪ್ರಮೋಷನ್ ಮಿಸ್ಸಾಯ್ತಲ್ಲಾ..ಅಂತ ಬೇಜಾಗಿರುತ್ತೇ”  ಎಂದು ವ್ಯಂಗ್ಯವಾಡಿದರು.

ಸ್ವಾಮೀಜಿಯನ್ನು ಆರೋಪಿಯ ರೀತಿಯಲ್ಲಿ ನೋಡುತ್ತಲೇ, ಅವರನ್ನು ಶರಣರು, ಸ್ವಾಮಿಗಳು, ಆಚಾರ್ಯರು ಎಂಬಂತೆ ಅತಿಯಾದ ಗೌರವವನ್ನು ಇಂದಿಗೂ ಕೆಲ ಮಾಧ್ಯಮಗಳು ತೋರಿಸುತ್ತವೆ. ಇದಕ್ಕೆ ಕಾರಣ ಅವರ ಮೇಲಿನ ಅತಿಯಾದ ಪ್ರೀತಿ ಮತ್ತು ಅವರ TRP ಯ ಸಮತೋಲನ ಇರಬಹುದು ಎಂದು ಟೀಕಿಸಿದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!