Thursday, September 19, 2024

ಪ್ರಾಯೋಗಿಕ ಆವೃತ್ತಿ

”ಭ್ರಷ್ಟಾಚಾರದ ಪೆಡಂಭೂತ ಶಾಸಕರ ತಲೆಗೆ ಹತ್ತಿದೆ, ಅವರು ದುಡ್ಡು ಮಾಡೋದು ಬಿಟ್ಟು ಬೇರೆನೂ ಮಾಡುತ್ತಿಲ್ಲ”

ನಾಗಮಂಗಲ ಶಾಸಕ ಸುರೇಶ್ ಗೌಡ ಅವರಿಗೆ ”ಭ್ರಷ್ಟಾಚಾರದ ಪೆಡಂಭೂತ ಶಾಸಕರ ತಲೆಗೆ ಹತ್ತಿದೆ, ಅವರು ದುಡ್ಡು ಮಾಡೋದು ಬಿಟ್ಟು ಬೇರೆನೂ ಮಾಡುತ್ತಿಲ್ಲ” ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ  ವಾಗ್ದಾಳಿ ನಡೆಸಿದರು.

ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಚೀಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ನಮ್ಮ ಬಳಿ ಅಸ್ತ್ರಗಳಿರಲಿಲ್ಲ, ಈಗ ಲೋಕಾಯುಕ್ತ  ಎಂಬ ಅಸ್ತ್ರವಿದೆ, ನೇರವಾಗಿ ಅವರಿಗೆ ದೂರು ನೀಡುತ್ತೇನೆ. ನಾಗಮಂಗಲ ಕ್ಷೇತ್ರ ಜನರು, ಸುರೇಶ್ ಗೌಡ ಅವರಿಗೆ ಎಂ.ಎಲ್.ಎ ಎಂಬ ಪದವಿಯನ್ನು ಕೊಟ್ಟಿದ್ದಾರೆ, ಆದರೆ ಅದನ್ನು ಅವರು ಭ್ರಷ್ಟಾಚಾರ ಮಾಡಲು ಬಳಸುತ್ತಿದ್ದಾರೆ, ಈ ಬಗ್ಗೆ ಶೀಘ್ರದಲ್ಲೇ ದೂರು ದಾಖಲಿಸಲಾಗುವುದು ಎಂದು ಹೇಳಿದರು.

ಕೇವಲ 10-15 ಕಂಟ್ಟ್ರಾಕರ್ ಗಳನ್ನು ಸಾಕಿಕೊಂಡರೆ ಸಾಲದು, ಅವರು ನೋಟು ಮಾಡಿಕೊಂಡು ಮನೆ ಸೇರಿಕಕೊಳ್ತಾರೆ, ಹಿಂದೆ ಚಲುವರಾಯಸ್ವಾಮಿಯ ಕಥೆ ಏನಾಯ್ತು ? ಅದೇ ಸ್ಥಿತಿ ಸುರೇಶ್ ಗೌಡರಿಗೂ ಬರುತ್ತೆ ಎಂದರು.

ಮೈಸೂರಿನಲ್ಲೇನೂ ಕೆಲಸ 

ಶಾಸಕರಿಗೆ ಮೈಸೂರಿನಲ್ಲೇನೂ ಕೆಲಸ, ಬೂಮ್ರಾ ಕಂಟ್ರಾಕ್ಟರ್ ಚಲುವರಾಯಸ್ವಾಮಿ ಅವರ ಪರಂ ಶಿಷ್ಯ, ಅವರ ಮನೆಯಲ್ಲಿ ನಿಮಗೇನು ಕೆಲಸ ಎಂದು ಪರೋಕ್ಷವಾಗಿ ಸುರೇಶ್ ಗೌಡ ಅವರನ್ನು ಪ್ರಶ್ನಿಸಿದರು. ಸಿ.ಜೆ.ಕುಮಾರ್ ಎನ್ನುವ ಸರ್ಕಾರಿ ನೌಕರನನ್ನು ಅಲ್ಲಿಗೆ ಕರೆಸಿ ಮಾತನಾಡುವಂತದ್ದೇನಿದೆ ? ಸಿ.ಜೆ.ಕುಮಾರ್ ಅಷ್ಟೊಂದು ಶಕ್ತಿಯುತವಾಗಿದ್ರೆ, ನಿವ್ಯಾಕೆ ಅವರನ್ನ ಹಿಂಬಾಲಿಸ್ತೀರಿ ಎಂದು ಪ್ರಶ್ನಿಸಿದರು.

ಗೌಡರ ಜೊತೆ ಸಂಬಂಧ ಹಳಸಲು ಕುಂತಂತ್ರಿಗಳು ಕಾರಣ 

ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದೊಂದಿಗೆ ಸಂಬಂಧ ಹಳಸಲು ಸ್ಥಳೀಯ ಕುತಂತ್ರಿ ರಾಜಕಾರಣಿಗಳೇ ಕಾರಣ. ಗೌಡರು ಒಂದು ಭಾರೀ ನನನ್ನು ಎಂ.ಪಿ. ಮಾಡಿದ್ರು, ಗೌಡರೊಂದಿಗಿನ ಸಂಬಂಧ ಚೆನ್ನಾಗೆ ಇತ್ತು. ಆದರೆ ಕೆಳಮಟ್ಟದ ಲೀಡರ್ ಗಳು ನನ್ನ ಹಾಗೂ ಅಪ್ಪಾಜಿಗೌಡರನ್ನ ಸಕ್ರಿಯ ರಾಜಕಾರಣದಿಂದ ದೂರ ಮಾಡಿದರು. ಅನಂತರ ನಿಖಿಲ್ ಕುಮಾರಸ್ವಾಮಿ ಅವರನ್ನು ಎಂ.ಪಿ ಚುನಾವಣೆಗೆ ಕರೆದಂದು, ಅವರನ್ನು ಸೋಲಿಸುವ ಮೂಲಕ ಅವಮಾನ ಮಾಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಹೇಮರಾಜು,ಮಾಜಿ ಸದಸ್ಯ ಕರಿಯಣ್ಣ, ಮುಖಂಡರಾದ ಬೊಮ್ಮೇಗೌಡ, ವಡ್ಡರಹಳ್ಳಿಶಿವಣ್ಣ, ಮಂಜೇಗೌಡ, ನಾರಾಯಣಬಾಬು, ಮರೀಗೌಡ, ಗಂಗೋಡಿ ಶಿವರಾಂ, ಸಿದ್ಧಲಿಂಗಣ್ಣ, ಚಿಣ್ಯ ಯಜಮಾನರಾದ ಪುಟ್ಟರಾಜು, ಹಲಗೇಗೌಡ, ಮಂಜುನಾಥ್, ರಘು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!