Thursday, September 19, 2024

ಪ್ರಾಯೋಗಿಕ ಆವೃತ್ತಿ

ಕರಿಯರ್ ಎಂದರೆ ಕೇವಲ ಕೆಲಸ ಹಿಡಿಯುವುದು ಅಲ್ಲ: ಉಮರ್

ಮಂಡ್ಯದ ಗಾಂಧಿ ಭವನದಲ್ಲಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ಅಭ್ಯಾಸ ವಿಷಯಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಕರ್ನಾಟಕ ಜನಶಕ್ತಿ ಶ್ರಮಿಕ ಶಕ್ತಿನಗರದಲ್ಲಿ ಬಳಗ ಮತ್ತು ಮಹಿಳಾ ಮುನ್ನಡೆ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಕ್ಯಾಂಪಸ್ ಕೆರಿಯರ್ ಅಕಾಡೆಮಿ ಅಧ್ಯಕ್ಷರಾದ ಯು.ಎಚ್ ಉಮರ್ ಎಸೆಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬುದರ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ಮುಂದಿನ ವಿಷಯಗಳ ಆಯ್ಕೆ ಬಗ್ಗೆ ಮಾರ್ಗದರ್ಶನ ನೀಡಿದರು. ಕರಿಯರ್ ಎಂದರೆ ಕೇವಲ ಒಂದು ಕೆಲಸ ಹಿಡಿಯುವುದೋ ಅಥವಾ ಸಂಬಳದ ಬಗ್ಗೆ ಚಿಂತಿಸುವುದೋ ಅಲ್ಲ, ತಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಕಂಡುಕೊಂಡು ಅದರಲ್ಲಿ ಪಟ್ಟುಹಿಡಿದು ಮುಂದುವರೆಯುವುದು. ಇದನ್ನು ಕರಿಯರ್ ಪ್ಲಾನಿಂಗ್ ಎನ್ನುತ್ತಾರೆ ಎಂದು ವಿವರಿಸಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ತೆಗೆದುಕೊಂಡರು ಅದಕ್ಕೆ ಕಠಿಣ ಶ್ರದ್ಧೆ ಮತ್ತು ಓದು ಅತಿಮುಖ್ಯ ಎಂದರು. ತಮ್ಮ ಬದುಕಿನಲ್ಲಿ ಅನೇಕ ಸವಾಲುಗಳಿರುವ ಸಂದರ್ಭದಲ್ಲೂ ಅವೆಲ್ಲವನ್ನೂ ಮೀರಿ ಸಾಧನೆ ಮಾಡಿರುವುದು ಮೆಚ್ಚಬೇಕಾದ ವಿಷಯ. ಅದೇ ರೀತಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ, ತಮ್ಮ ಕುಟುಂಬಗಳಿಗೂ ಹೆಮ್ಮೆ ತಂದು, ಸಮಾಜಕ್ಕೆ ಉತ್ತಮ‌ನಾಗರೀಕರಾಗಿ, ಮಾನವತೆಯ ಪ್ರೀತಿ- ಸಹಬಾಳ್ವೆಯ ಸಂದೇಶ ಸಾರುವಂತಾಗಲಿ ಎಂದು ಹಾರೈಸಿದರು.

ನೆಲದನಿ ಬಳಗದ ಅಧ್ಯಕ್ಷರಾದ ಲಂಕೇಶ್ ರವರು ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಪ್ರೋತ್ಸಾಹದ ಮಾತುಗಳನ್ನಾಡಿದರು.

ಕರ್ನಾಟಕ ಜನಶಕ್ತಿಯ ಮುಖಂಡರಾದ ಸಿದ್ಧರಾಜುರವರು, ಶ್ರಮಿಕನಗರ ನಿವಾಸಿಗಳ ಒಕ್ಕೂಟದ ಪ್ರಕಾಶ್‌ರವರು, ಮಹಿಳಾ ಮುನ್ನಡೆಯ ಶಿಲ್ಪರವರು ಉತ್ತಮ ಅಂಕಗಳನ್ನು ಗಳಿಸಿದ ಶ್ರಮಿಕರ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಮಂಡ್ಯ ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ದರಾಜು, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಪ್ರಕಾಶ್, ಮಹಿಳಾ ಮುನ್ನಡೆ ಸಂಘದ ಶಿಲ್ಪ ಸೌಮ್ಯ ಈಶ್ವರಿ ಮಹದೇವಿ ಮುಸ್ಲಿಮ್ ಒಕ್ಕೂಟದ ಮಹಿಳಾ ಘಟಕದ ಪ್ರತಿನಿಧಿ ಮೆಹರ್ ತಾಜ್, ನಾಗರೇವಕ್ಕ ವಿದ್ಯಾರ್ಥಿ ಸಂಘಟನೆಯ ಕೌಶಲ್ಯ ಅಂಜಲಿ ಹಾಗೂ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!