Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ರಿಟಿಕಲ್ ಕೀರ್ತನೆಗಳು ಸಿನಿಮಾ ಸುತ್ತ ಒಂದು ನೋಟ

ಇತ್ತೀಚೆಗೆ ಬಿಡುಗಡೆಗೊಂಡಿರುವ ಕನ್ನಡದ “ಕ್ರಿಟಿಕಲ್ ಕೀರ್ತನೆಗಳು” ಸಿನಿಮಾ ಸದ್ಯಕ್ಕೆ ಪ್ರೇಕ್ಷಕರ ಮನಸ್ಸು ಗೆದ್ದು ಸದ್ದು ಮಾಡಲು ಶುರುವಾಗಿದೆ.

ಐಪಿಎಲ್ ಕ್ರಿಕೆಟ್ ಆಟವು ಈಗ ಆಟಕ್ಕಿಂತ ಹಣ ಮಾಡುವ ಮತ್ತು ಹಣ ಕಳೆದುಕೊಳ್ಳುವ ಒಂದು ಉದ್ಯಮವಾಗಿ ಪರಿವರ್ತನೆಯಾಗಿ ಬಿಟ್ಟಿದೆ.ಇದರಿಂದ ಎಷ್ಟೋ ಕುಟುಂಬ ಬೀದಿ ಪಾಲಾಗಿರುವ ಘಟನೆಯನ್ನು ಆಧರಿಸಿ ನಿರ್ದೇಶಕ ಕುಮಾರ್ ಈ ಸಿನಿಮಾ ಮಾಡಿದ್ದಾರೆ.

ಸಿನಿಮಾದ ಫಸ್ಟ್ ಹಾಫ್ ಹಾಸ್ಯ ಮತ್ತು ರೋಮ್ಯಾಂಟಿಕ್ ಆಗಿ ಮನರಂಜನೆ ನೀಡುತ್ತಾ ಸಾಗುತ್ತದೆ. ಸೆಕೆಂಡ್ ಆಫ್ ನಲ್ಲಿ ಸಿನಿಮಾದ ಆಶಯವನ್ನು ಪ್ರೇಕ್ಷಕರಿಗೆ ತಿಳಿಸುವುದು ಆಗಿದೆ.

ಕ್ರಿಕೆಟ್ ಬೆಟ್ಟಿಂಗ್ ದೇಶದಲ್ಲಿ ಯಾವ ಮಟ್ಟವನ್ನು ತಲುಪಿದೆ ಇದರಿಂದ ವಿದ್ಯಾವಂತರು, ಯುವಜನರು,ಅವಿದ್ಯಾವಂತರು,ಮಧ್ಯವಯಸ್ಕರು ಹೀಗೆ ಎಲ್ಲರ ಜೀವನ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ.

ಇಂತಹದ್ದೊಂದು ಸೀರಿಯಸ್ ಕಥೆಯನ್ನು ನಿರ್ದೇಶಕ ಕುಮಾರ್ ತಾವು ಆಯ್ದುಕೊಂಡಿರುವ ಬಗ್ಗೆ, ಜನರಿಗೆ ತುಂಬಾ ಇಷ್ಟವಾಗಿದೆ ಎನ್ನುವುದನ್ನು ಸಿನಿಮಾ ನೋಡಿದ ನಂತರ ಮಾತನಾಡುವಾಗ ತಿಳಿಯಬಹುದಾಗಿದೆ.

ಈ ಹಿಂದೆ ಅವರು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮಾಡಿ ಸರಳವಾದ ಕಥೆಯನ್ನು ಸಿನಿಮಾ ಮಾಡಿದ್ದರು.

ಶಿವು ಮತ್ತು ರಾಜ ಶಿವಶಂಕರ್ ಇಬ್ಬರು ಸಿನಿಮಾಟೋಗ್ರಫಿ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಿ ಗಮನಸೆಳೆದಿದ್ದಾರೆ.

ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಇವರುಗಳು ಮುಖ್ಯಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ.

ರಜಾದಿನಕ್ಕೊಂದು ಕುಟುಂಬ ಸಮೇತ ಸಿನಿಮಾ ನೋಡಿ. ಬೆಟ್ಟಿಂಗ್ ಪ್ರಿಯರಿಗೂ ತಲುಪಿಸಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!