Friday, September 20, 2024

ಪ್ರಾಯೋಗಿಕ ಆವೃತ್ತಿ

ಬೆಳೆ ಪರಿಹಾರ ನೀಡದ ಬಿಜೆಪಿ ಕೇಂದ್ರ ಸರ್ಕಾರ: ದಿನೇಶ್ ಗೂಳಿಗೌಡ

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಉದಾಸೀನದ ಪ್ರವೃತ್ತಿ ತಾಳಿದ್ದು, 18 ಸಾವಿರ ಕೋಟಿ ರೂ ಬೆಳೆನಷ್ಟವಾಗಿರುವ ಮಾಹಿತಿ ನೀಡಿದರೂ ನಯಪೈಸೆ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಕಿಡಿಕಾರಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಎದುರಿನ ಕಾಂಗ್ರೆಸ್ ನಿವೇಶನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತರ ಹಿತಕ್ಕಾಗಿ 33 ಲಕ್ಷ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ಗಳನ್ನು ರಾಜ್ಯಸರ್ಕಾರದಿಂದ ನೀಡಲಾಗಿದೆ ಎಂದು

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಉದಾಸೀನದ ಪ್ರವೃತ್ತಿ ತಾಳಿದ್ದು, 18 ಸಾವಿರ ಕೋಟಿ ರೂ ಬೆಳೆನಷ್ಟವಾಗಿರುವ ಮಾಹಿತಿ ನೀಡಿದರೂ ನಯಪೈಸೆ ನೀಡಿಲ್ಲ, ಆದರೂ ರೈತರ ಹಿತಕ್ಕಾಗಿ 33 ಲಕ್ಷ ರೈತರ ಖಾತೆಗಳಿಗೆ ತಲಾ 2 ಸಾವಿರ ರೂಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಬೆಲೆ ಏರಿಕೆಯಿಂದ ಉಂಟಾಗಿರುವ ಅರ್ಥಿಕ ದುಸ್ಥಿತಿಯಿಂದ ನರಳುತ್ತಿರುವ ಜನಸಾಮಾನ್ಯರನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿರುವ ಗ್ಯಾರಂಟಿಗಳನ್ನು ಸಕಾಲದಲ್ಲಿ ಈಡೇರಿಸಿರುವ ತೃಪ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ತಿಳಿಸದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕಾರು ಸಾವಿರ ಮಂದಿಗೆ ಉದ್ಯೋಗ ಒದಗಿಸಿದ್ದು, ಸಮಾಜ ಸೇವೆಯ ಆಶಯದಿಂದ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದು, ಅವರನ್ನು ಹೆಚ್ಚು ಬಹುಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ಮಾತನಾಡಿ, ಚುನಾವಣಾ ಬಾಂಡ್‌ಗಳ ಮೂಲಕ ಅಕ್ರಮ ಹಣ ಶೇಖರಣೆ ಮಾಡಿರುವ ಬಿಜೆಪಿ ಪಕ್ಷದ ಬಂಡತನವನ್ನು ಸುಪ್ರಿಂಕೊರ್ಟ್ ಬಯಲುಗೊಳಿಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಗೆಲುವು ಎಂದು ಬಣ್ಣಿಸಿದರು.

ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಮಲ್ಲಿಕಾರ್ಜುನಖಾರ್ಗೆ, ಸೋನಿಯಾಗಾಂಧಿ,ರಾಹುಲ್‌ಗಾAಧಿ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಒಮ್ಮತದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಜಿಲ್ಲೆಯ ಸಚಿವ ಹಾಗೂ ಶಾಸಕರುಗಳ ಬೆಂಬಲದಿAದ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಜನಸೇವೆ ಮಾಡುವ ಹಂಬಲದಿಂದ ರಾಜಕೀಯ ಪ್ರವೇಶಿಸಿದ್ದೇನೆ, ನನಗೆ ಹಣ ಮಾಡುವ ಆಗತ್ಯವಿಲ್ಲ, ಶಾಸಕ ನರೇಂದ್ರಸ್ವಾಮಿ ಅವರಂತೆ ಹೆಚ್ಚು ಬಹುಮತದಿಂದ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!