Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅರುವಿ ಸಾಂಸ್ಕೃತಿಕ ಉತ್ಸವದಲ್ಲಿ ಗಾಯನ ಸಂಭ್ರಮ

ಮಂಡ್ಯ ನಗರದ ಬಾಲಭವನದ ಆವರಣದಲ್ಲಿ ಅರುವಿ ಟ್ರಸ್ಟ್‌ ಹಾಗೂ ವೀನಸ್‌ ಅಕಾಡೆಮಿ ವತಿಯಿಂದ ಅರುವಿ ಸಾಂಸ್ಕೃತಿಕ ಉತ್ಸವ– 2023 ಕಾರ್ಯಕ್ರಮ ನಡೆಯಿತು.

ಎಸ್‌.ಬಿ.ಎಜುಕೇಷನ್‌ ಟ್ರಸ್ಟ್‌ ಮುಖ್ಯಸ್ಥೆ ಮೀರಾ ಶಿವಲಿಂಗಯ್ಯ ಮಾತನಾಡಿ, ಹೂವನ್ನು ಮಾಲೆಯಾಗಿ ಕಟ್ಟುವ ಮೂಲಕ ದೇವರಿಗೆ ಸಮರ್ಪಿಸಿದರೆ ಅದು ಸಂಸ್ಕೃತಿ ಆಗುತ್ತದೆ. ಅದೇ ರೀತಿಯಾಗಿ ಅರುವಿ ಟ್ರಸ್ಟ್‌ನವರು ಪ್ರಕೃತಿದತ್ತವಾಗಿರುವ ಕಲೆಯ ಕಾರ್ಯಕ್ರಮಗಳನ್ನು ಆಚರಿಸಲು ಹೆಚ್ಚು ಒತ್ತು ನೀಡಿದ್ದಾರೆ ಎಂದು ಬಣ್ಣಿಸಿದರು.

ಜಾನಪದ ಕಲೆಗಳು, ನಮ್ಮ ಸಾಂಸ್ಕೃತಿಕ ಕಲೆಗಳು ಸಂಸ್ಕೃತಿಯಾಗಿ ಹೊರ ಹೊಮ್ಮುತ್ತದೆ. ಹೂವು ಅಲ್ಲೇ ಇದ್ದುಕೊಂಡು ಸುವಾಸನೆಯನ್ನು ಕೊಡುವ ಹಾಗೆ ಜನಪದವೂ ಕೂಡ ಒಂದು ಕಡೆಯಿಂದಲೇ ಅದರ ಸೊಗಡನ್ನು ಬೀರುತ್ತಿದೆ. ಗ್ರಾಮೀಣ ಭಾಗದಲ್ಲಿ ಜಾನಪದ ಉತ್ಸವ ನಡೆಯಬೇಕು. ಆ ಮೂಲಕ ಅದನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆರೋಗ್ಯ ಇಲಾಖೆ ಶಿಕ್ಷಣದ ನಿವೃತ್ತ ಅಧಿಕಾರಿ ಶಿವಾನಂದ ಅವರು, ಗ್ರಾಮೀಣ ಭಾಗದಲ್ಲಿ ನನ್ನ ಸೇವೆಯಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿದ್ದೆ, ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದೆ. ಮೂಢನಂಬಿಕೆಗಳಿಂದ ದೂರುವಿರುವಂತೆಯು ಹಲವು ಕಾರ್ಯಕ್ರಮಗಳನ್ನು ನೀಡಿದ್ದೆವು, ಅದರಂತೆ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಗಾಮನಹಳ್ಳಿ ಸ್ವಾಮಿ, ಬಪ್ಪಿಬ್ಲಾಸಂ, ಲೋಕೇಶ್‌, ನೇತ್ರಾವತಿ, ಶೇಖರ್, ಬಸವರಾಜು ಅವರು ಗಾಯನ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಅರುವಿ ಟ್ರಸ್ಟ್‌ನ ಅಧ್ಯಕ್ಷೆ ಅರುಣಾ ಈಶ್ವರ್‌, ವಿ.ಸಿ.ಫಾರಂ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ್‌, ಗಾಯಕ ಡಾ.ಎಂ.ಮಹದೇಶ್‌, ಲೋಕೇಶ್‌ಹಾಲತಿ, ಎಚ್‌.ಪಿ.ವೈರಮುಡಿ, ಶೇಖರ್ ಹನಿಯಂಬಾಡಿ, ಸಂತೆಕಸಲಗೆರೆ ಬಸವರಾಜು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!