Thursday, November 19, 2026

ಪ್ರಾಯೋಗಿಕ ಆವೃತ್ತಿ

ದೇವಸ್ಥಾನದಲ್ಲಿ ಕಳ್ಳತನ

ಮದ್ದೂರು ತಾಲ್ಲೂಕಿನ ಭಾರತೀನಗರದ ಸಮೀಪದ ಅರೇಚಾಕನಹಳ್ಳಿಯ ದೇವಮ್ಮ ದೇವಸ್ಥಾನದ ಬೀಗ ಒಡೆದು ಲಕ್ಷಾಂತರ ಮೌಲ್ಯದ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ದೇವಾಲಯದ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಹುಂಡಿ ಒಡೆದು ಸುಮಾರು 1.5ಲಕ್ಷಕ್ಕೂ ಹೆಚ್ಚು ನಗದು ,ಬೆಳ್ಳಿ ದೀಪಗಳು,ದೇವರ ಮೈ ಮೇಲಿದ್ದ ಚಿನ್ನದ ಸರ 18 ಮಾಂಗಲ್ಯಗಳು, 20 ಚಿನ್ನದ ಗುಂಡುಗಳು ,4ಕೆ.ಜಿ.ಬೆಳ್ಳಿ ವಿಗ್ರಹ ಕದ್ದು ಪರಾರಿಯಾಗಿದ್ದಾರೆ.

ಮುಂಜಾನೆ ದೇವಸ್ಥಾನದ ಬಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಶ್ವಾನ ದಳದವರು ಅಗಮಿಸಿ ಸ್ಥಳ ಪರಿಶೀಲಿಸಿದರು.

ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಆದಷ್ಟು ಬೇಗ ಕಳ್ಳರನ್ನು ಹಿಡಿಯಲಾಗುವುದೆಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ