ಪಾಂಡವಪುರ ತಹಶೀಲ್ದಾರ್ ಎಸ್.ಎಲ್. ನಯನ ಅವರು ದಕ್ಷತೆಯಿಂದ ಜನಪರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಕೆಂಪೇಗೌಡ ಯುವಶಕ್ತಿ ವೇದಿಕೆಯ ಮಂಡ್ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಹೇಳಿದರು.
ಮಾದರಿ ತಹಶೀಲ್ದಾರ್ ಆಗಿ ಪಾಂಡವಪುರ ತಾಲ್ಲೂಕಿನ ಜನತೆಗೆ, ರೈತರಿಗೆ ಸೇವೆ ಸಲ್ಲಿಸುತ್ತಿರುವ ತಹಶೀಲ್ದಾರ್ ಎಸ್.ಎಲ್.ನಯನ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ರೈತರಿಗೆ, ಜನಸಾಮಾನ್ಯರಿಗೆ ಮತ್ತಷ್ಟು ಉಪಯುಕ್ತವಾದ ಕೆಲಸಗಳನ್ನು ಮಾಡುವಂತಾಗಲಿ ಎಂದರು.
ಪಾಂಡವಪುರ ತಹಶೀಲ್ದಾರ್ ಹುದ್ದೆಗೆ ತಮ್ಮಂತ ಮಾದರಿ, ಖಡಕ್ ಅಧಿಕಾರಿ ನೇಮಕ ಆಗಿರೋದು ನಮಗೆಲ್ಲಾ ಖುಷಿ ತಂದಿದೆ ಎಂದು ಶುಭ ಕೋರಿದರು.
ಕರ್ನಾಟಕ ರಕ್ಷಣಾ ಪಡೆ ಸಂಘಟನೆಯ ಪಾಂಡವಪುರ ಟೌನ್ ಘಟಕದ ಅಧ್ಯಕ್ಷ ಶಿವಕುಮಾರ್, ವಿಠಲ, ಬನಘಟ್ಟ ಮಹದೇವ, ನಿವೃತ್ತ ಶಿಕ್ಷಕ ಶಿವಣ್ಣ ಉಪಸ್ಥಿತರಿದ್ದರು.
ಇದನ್ನು ಓದಿ: ಕನಗನಮರಡಿ ಗಣಿಗಾರಿಕೆಗೆ ಜಿಲ್ಲಾಡಳಿತ ಮತ್ತು ತಾಲೂಕು ತಹಶೀಲ್ದಾರ್ ಶಾಮೀಲು