Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿದ ಎತ್ತು : ವೀಡಿಯೋ ವೈರಲ್

ತಮಟೆ ಏಟಿಗೆ ಚಿಕ್ಕ ಮಕ್ಕಳಿಂದ ಮುದುಕರವರೆಗೆ ಹೆಜ್ಜೆ ಹಾಕಿ ಕುಣಿಯುವುದು ಸರ್ವೇ ಸಾಮಾನ್ಯ. ಆದರೆ ಮೂಕ ಪ್ರಾಣಿಯಾದ ಎತ್ತು ಕೂಡ ತಮಟೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನೂ ನೀವು ಎಲ್ಲದರೂ ನೋಡಿದ್ದೀರಾ ? ಅಂತಹ ವಿಶೇಷ ಕುಣಿತ ಮಂಡ್ಯದಲ್ಲಿ ಸಂಕ್ರಾಂತಿ ದಿನದಂದು ನಡೆದಿದೆ.

ಮಂಡ್ಯ ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದ ನಾಯಕರ ಬಳಗದ ಹುಡುಗರು ಕಿಚ್ಚು ಹಾಯಿಸಲು ಸಿಂಗರಿಸಿ ಕರೆದುಕೊಂಡು ಹೋಗುತ್ತಿದ್ದ ಎತ್ತೊಂದು ತಮಟೆ ಸದ್ದಿಗೆ ಡ್ಯಾನ್ಸ್ ಮಾಡುವ ಮೂಲಕ ಎಲ್ಲರೂ ಅಚ್ಚರಿಪಡುವಂತೆ ಮಾಡಿತು.

ಇದನ್ನು ಕಂಡ ಗ್ರಾಮಸ್ಥರು ಶಿಳ್ಳೆ, ಕೇಕೆಗಳನ್ನು ಹಾಕಿ ಎತ್ತು ಡ್ಯಾನ್ಸ್ ಮಾಡುವಂತೆ ಹುರಿದುಂಬಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!