Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ನಟ ದರ್ಶನ್

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಅಭಿಮಾನಿಗಳಿಗೆ ಫೆಬ್ರವರಿಯಲ್ಲಿ ಗಿಫ್ಟ್ ವೊಂದನ್ನು  ನೀಡಿದ್ದಾರೆ.

ತಮ್ಮ ಎದೆಯ ಭಾಗದಲ್ಲಿ ‘ನನ್ನ ಲವ್ ಸೆಲೆಬ್ರಿಟೀಸ್’ ಎಂದು ಟ್ಯಾಟೋ ಹಾಕಿಸಿಕೊಂಡಿದ್ದು, ಟ್ಯಾಟೋ ಹಾಕಿಸಿಕೊಳ್ಳುತ್ತಿರುವ ವಿಡೀಯೋವನ್ನು ಯೂಟ್ಯೂಬ್ ಗೆ ಹಾಕಲಾಗಿದ್ದು, ಈ ವಿಡೀಯೋ ಈಗ ವೈರಲ್ ಆಗಿದೆ. ಒಟ್ಟಿನಲ್ಲಿ ತಮ್ಮ ಹೃದಯ ಭಾಗದಲ್ಲಿ ಟ್ಯಾಟೋ ಹಾಕಿಸಿಕೊಂಡಿರುವ ನಟ ದರ್ಶನ್ ಅದನ್ನು ಅಭಿಮಾನಿಗಳಿಗಳಿಗೆ ಅರ್ಪಿಸಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾಗಿದ್ದ ‘ಕ್ರಾಂತಿ’ ಚಿತ್ರಕ್ಕೆ ಮಾಧ್ಯಮಗಳಲ್ಲಿ ನಿರೀಕ್ಷಿತ ಪ್ರಚಾರ ಸಿಗದ ಹಿನ್ನೆಲೆಯಲ್ಲಿ ಅಭಿಮಾನಿಗಳೆ ಎಲ್ಲೆಡೆ ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದರು. ನಂತರ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಫೆ.16ರಂದು ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ತನ್ನ ಅಭಿಮಾನಿಗಳಿಗಾಗಿ ಟ್ಯಾಟೋ ಹಾಕಿಸಿಕೊಂಡು, ಅದನ್ನು ಅಭಿಮಾನಿಗಳಿಗಾಗಿಯೇ ಅರ್ಪಣೆ ಅರ್ಪಣೆ ಮಾಡಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಸ್ಟಾರ್ ನಟರ ಅಭಿಮಾನಿಗಳು ತಮ್ಮ ಹೀರೋಗಳ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಚಿತ್ರ ನಟರೊಬ್ಬರೆ ಅಭಿಮಾನಿಗಳಿಗಾಗಿ ಟ್ಯಾಟೋ ಹಾಕಿಸಿಕೊಂಡಿರುವುದು ಭಾರತೀಯ ಚಿತ್ರರಂಗದಲ್ಲೆ ಪ್ರಥಮ ಎನ್ನಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!