Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| 1.33 ಕೋಟಿ ರೂ.ವೆಚ್ಚದ ಯೋಜನೆಗೆ ಶಾಸಕರ ಚಾಲನೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ದುದ್ದ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸುಮಾರು 1 ಕೋಟಿ 33 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಭೂಮಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಜಿ.ಪಂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಯೋಜನೆಯಡಿ ತಾಲೂಕಿನ ಬೀರಗೌಡನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ನಲ್ಲಿ ಸಂಪರ್ಕ ಕಾಮಗಾರಿಯು 33 ಲಕ್ಷ ರೂ.ಗಳಲ್ಲಿ ನಡೆಯಲಿದೆ, ಪ್ರತಿ ಮನೆಗೂ ಶುದ್ದ ಕುಡಿಯುವ ನದಿ ನೀರು ಸರಬರಾಜು ಆಗಲಿದೆ ಎಂದರು.

ಹಾಡ್ಯ ಮತ್ತು ಮಾಚಹಳ್ಳಿಯ ಗ್ರಾಮಗಳ ಅಭಿವೃದ್ದಿಗೆ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ, ಗ್ರಾಮೀಣ ಜನತೆಯು ದೂರದದಿಂದ ಕುಡಿಯುವ ನೀರು ತರುವುದನ್ನು ತಪ್ಪಿಸಲಾಗುತ್ತಿದೆ, 3 ನೇ ಹಂತ ಯೋಜನೆಯು ಕಾರ್ಯಗತಗೊಳ್ಳುತ್ತಿದೆ, ಜನರ ಬದುಕನ್ನು ಮತ್ತಷ್ಟು ಅಸನು ಮಾಡಲು ಯೋಜನೆಗಳು ರೂಪಗೊಂಡಿವೆ ಎಂದು ತಿಳಿಸಿದರು.

ಇಂದು ಕೆ.ಆರ್.ಎಸ್.ನಲ್ಲಿ ಕಾವೇರಿ ನದಿ ನೀರಿನ ವಿಚಾರ ಕುರಿತ ಸಭೆ ನಡೆಯಿತು, 16 ಟಿ.ಎಂ.ಸಿ ನೀರಿನಲ್ಲಿ ಜೂನ್ ವರೆಗೂ ಬೆಳೆ ಮತ್ತು ಜನ-ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವುದು, ಸಂಕ್ರಾಂತಿ ವೇಳೆಗೆ ನೀರು ಬಿಡುವ ವಿಚಾರವೂ ಚರ್ಚೆಗೆ ಬಂದಿದೆ, ಹಲವು ರೀತಿಯಲ್ಲಿನ ಚರ್ಚೆಗಳು ನಡೆದಿವೆ ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿವೆ ಎಂದರು.

ಬರ ಪರಿಹಾರ ಹಣದ ಮಾಹಿತಿ

ರಾಜ್ಯದಲ್ಲಿ ಹಲವು ಜಿಲ್ಲೆಗಳನ್ನು ಬರ ಪ್ರದೇಶ ಎಂದು ಘೋಷಿಸಲಾಗಿದೆ, ರಾಜ್ಯಸರ್ಕಾರವು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಬರಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ, ವಿಧಾನಸಭೆಯಲ್ಲೂ ಚರ್ಚೆಯಾಗಿದೆ, ೨೦೦೦ ರೂ.ಕೊಡಲಿಕ್ಕೆ ತೀರ್ಮನವಾಗಿದೆ, ಅದು ಯಾವುದಲ್ಲೂ ಸಾಲದು ಎಂದು ಚರ್ಚೆ ನಡೆದಿದೆ, ಅದನ್ನು ಸರಿಪಡಿಸಲಿಕ್ಕೆ ಸರ್ಕಾರ ತೀರ್ಮನಿಸಿದೆ, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜನಿಯರ್ ಚೇತನ್, ಗ್ರಾ.ಪಂ. ಸದಸ್ಯರಾದ ಅವಿನಾಶ್, ಮರಿಸ್ವಾಮಿ, ವಿನೋದ್, ಪ್ರದೀಪ್,ದೀಪಕ್,ಶಂಕರೇಗೌಡ, ನಿಂಗರಾಜ್, ರೈತಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿಚಂದ್ರಶೇಖರ್, ಮುಖಂಡರಾದ ಶಿವರಾಂ, ನಿಂಗರಾಜ್, ಮೋಹನ್, ಗುತ್ತಿಗೆದಾರ ಅರುಣ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ