Wednesday, July 24, 2024

ಪ್ರಾಯೋಗಿಕ ಆವೃತ್ತಿ

ಪುಂಡರಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ಹಾಡುಹಗಲೇ ವ್ಯಕ್ತಿಯ ಮೇಲೆ ಇಬ್ಬರು ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ.

ಮಂಡ್ಯ ತಾಲ್ಲೂಕಿನ ಯಲಿಯೂರು ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಇಬ್ಬರು ಪುಂಡರು ಬೈಕ್ ನಲ್ಲಿ ಸ್ಪೀಡಾಗಿ ಓಡಿಸುತ್ತಿದ್ದರು.

ಇದನ್ನು ತೂಬಿನಕೆರೆ ಗ್ರಾಮದ ಶಂಕರೇಗೌಡ (60) ಎಂಬ ವ್ಯಕ್ತಿ ಪ್ರಶ್ನೆ ಮಾಡಿ ಸರಿಯಾಗಿ ಬೈಕ್ ಓಡಿಸಿ, ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹೀಗೆ ಓಡಿಸಿದ್ರೆ ಬೇರೆಯವರು ಸಾಯುತ್ತಾರೆ ಎಂದಿದ್ದರು.

ಇಷ್ಟಕ್ಕೆ ಶಂಕರೇಗೌಡರನ್ನು ಅಡ್ಡಗಟ್ಟಿ ಚಾಕುವಿನಿಂದ ಮನಬಂದಂತೆ
ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹೊಟ್ಟೆಗೆ ಚಾಕು ಹಾಕಿರುವುದರಿಂದ ಗಂಭೀರ ಗಾಯಗೊಂಡಿರುವ ಶಂಕರೇಗೌಡರಿಗೆ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಂಕರೇಗೌಡರಿಗೆ ಹಲ್ಲೆ ನಡೆಸುತ್ತಿರುವ ದೃಶ್ಯ ವಾಹನ ಸವಾರರೊಬ್ಬರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪುಡಾರಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!