Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ಮತದಾನಕ್ಕೂ ಮುನ್ನ ಬಿಸಿಲಿನ ತಾಪಕ್ಕೆ ನಾಲ್ವರು ಚುನಾವಣಾಧಿಕಾರಿಗಳ ಸಾವು

ಬಿಹಾರದ ಆರಾದಲ್ಲಿ ತೀವ್ರ ಬಿಸಿಲಿನ ತಾಪಕ್ಕೆ ನಾಲ್ವರು ಚುನಾವಣಾಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಬೋಜ್‌ಪುರ್‌ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್‌ ತಿಳಿಸಿದ್ದಾರೆ. ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ ಹೊರತಾಗಿಯೂ ಈ ಆಘಾತಕಾರಿ ಘಟನೆ ಸಂಭವಿಸಿದೆ ಎಂದು ಕುಮಾರ್ ಅವರು ತಿಳಿಸಿದ್ದಾರೆ.

“ಇಲ್ಲಿಯವರೆಗೂ, ನಾಲ್ವರು ಚುನಾವಣಾಧಿಕಾರಿಗಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರು, ವಾಸ್ತವ್ಯ ಹಾಗೂ ಇತರ ಸೌಲಭ್ಯಗಳನ್ನು ಪ್ರತಿ ರವಾನೆ ಕೇಂದ್ರಗಳಲ್ಲಿ ಲಭ್ಯವಿರಿಸಲಾಗಿದೆ. ಆದರೂ ಅನಿರೀಕ್ಷಿತ ಘಟನೆ ಸಂಭವಿಸಿದೆ” ಎಂದು ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಉತ್ತರ ಭಾರತದ 37 ನಗರಗಳಲ್ಲಿ ಕಳೆದ 2 ದಿನಗಳಿಂದ ತೀವ್ರ ಬಿಸಿಲನ ತಾಪ ಸಂಭವಿಸಿದ್ದು,10 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನವದೆಹಲಿಯಲ್ಲಿ ಬುಧವಾರ ದಾಖಲೆ ಮಟ್ಟದಲ್ಲಿ 52.3 ಡಿಗ್ರಿ ಸೆಲ್ಷಿಯಸ್‌ ತಾಪಮಾನ ದಾಖಲಾಗಿತ್ತು.

ಜೂನ್‌ 1 ರಂದು ನಡೆಯುವ ಏಳನೇ ಹಾಗೂ ಅಂತಿಮ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 8 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರೊಂದಿಗೆ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!