ನಟ ಸಾರ್ವಭೌಮ ಡಾ.ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುತ್ಥಳಿಯ ಅಮರ ಜ್ಯೋತಿ ರಥ ಇಂದು ಬೆಳಿಗ್ಗೆ ಮದ್ದೂರಿಗೆ ಆಗಮಿಸಿತು.
ಪಟ್ಟಣಕ್ಕೆ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಅಪ್ಪು ಭಾವಚಿತ್ರದೊಂದಿಗೆ ಡ್ಯಾನ್ಸ್ ಮಾಡುವುದರ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು.
ರಸ್ತೆ ಉದ್ದಕ್ಕೂ ಅಭಿಮಾನಿಗಳು ಪುಷ್ಪಾರ್ಚನೆ ಹಾಗೂ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ತಮ್ಮ ಅಭಿಮಾನವನ್ನು ಮೆರೆದರು.
ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕದಲೂರು ರವಿ ಮಾತನಾಡಿ, ಕನ್ನಡ ಚಿತ್ರರಂಗದ ಮೇರು ನಟ, ನಟ ಸಾರ್ವಭೌಮ, ದೇವತಾ ಮನುಷ್ಯ ಡಾ. ರಾಜಕುಮಾರ್ ಅವರ ಅಭಿನಯ ಎಂದೂ ಮರೆಯಲಾಗದು. ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆ ಅನನ್ಯವಾದದ್ದು, ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ್, ಗುರುಪ್ರಸಾದ್, ಮುನಿಯಪ್ಪ,ಮಹೇಶ್, ಸುರೇಶ, ಸತೀಶ್, ಪ್ರವೀಣ್, ಕಾರ್ತಿಕ್, ಧನಂಜಯ,ಮೋನಿ ಮತ್ತಿತರರಿದ್ದರು.
ಇದನ್ನೂ ಓದಿ: ಮದ್ದೂರಿನಲ್ಲಿ ಪ್ರಾರಂಭವಾಯ್ತು ಸಿ ಎನ್ ಜಿ ಗ್ಯಾಸ್ ಸ್ಟೇಷನ್… ಎಲ್ಲಿ? ಗೊತ್ತಾ