Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿಸೆಂಬರ್ ನಲ್ಲಿ ಐಎಎಸ್-ಕೆಎಎಸ್ ತರಬೇತಿ ಪ್ರಾರಂಭ

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವತಿಯಿಂದ ಆಸಕ್ತ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಡಿಸೆಂಬರ್ 2ನೇ ವಾರದಿಂದ ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳ ತರಬೇತಿ ಪ್ರಾರಂಭವಾಗಲಿದೆ ಎಂದು ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ನ ಅಧ್ಯಕ್ಷ  ಟಿ.ತಿಮ್ಮೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದ ಅವಧಿಯ ವಸತಿ ಸಹಿತ ತರಬೇತಿ ಆರಂಭವಾಗಲಿದ್ದು, ನಮ್ಮಲ್ಲಿ ತರಬೇತಿಗೆ ದಾಖಲಾಗುವ ಆರ್ಥಿಕವಾಗಿ ತೊಂದರೆ ಇರುವ ಪ್ರತಿಭಾವಂತ ಬಡ, ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಆರ್ಥಿಕವಾಗಿ ಸಹಾಯ ನೀಡಲಾಗುವುದು ಎಂದರು.

ಉದ್ಯೋಗಾಕಾಂಕ್ಷಿ ಯುವಕ – ಯುವತಿಯರಿಗೆ ಐ.ಎ.ಎಸ್, ಬಿ.ಪಿ.ಎಸ್, ಐ.ಎಫ್.ಎಸ್. ಮತ್ತು ಕರ್ನಾಟಕ ನಾಗರೀಕ ಸೇವೆಗಳಾದ ಕೆ.ಎ.ಎಸ್, ಬಿ.ಎಸ್‌.ಪಿ.ಎಸ್, ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳು, ಪಿ.ಎಸ್.ಐ. ಬಿ.ಎಸ್.ಐ, ಎಫ್.ಡಿ.ಎ. ಎಸ್.ಡಿ.ಎ., ಪಿ.ಡಿ.ಓ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 & 1 ಸಹಾಯಕ ಪ್ರಾಧ್ಯಪಕ್ಷ ಮತ್ತು ಉಪನ್ಯಾಸಕರ ನೇಮಕ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ, ಪೊಲೀಸ್ ಪೇದೆ, ಗ್ರೂಪ್-2 ಹುದ್ದೆಗಳ ನೇಮಕ, ರೈಲ್ವೆ ಇಲಾಖೆ ಪರೀಕ್ಷೆಗಳಿಗೆ ಸಜ್ಜುಗೊಳಿಸಲಾಗುವುದು ಎಂದರು.

ಪಠ್ಯಕ್ರಮಗಳ ಅನುಗುಣವಾಗಿ ರಾಜ್ಯದ ಖ್ಯಾತ ವಿಷಯತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಪ್ರತಿ ವಾರ ಮಾದರಿ ಪರೀಕ್ಷೆ ಮತ್ತು ವಿಶ್ಲೇಷಣಾತ್ಮಕ, ತರಗತಿ, ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ, ಗುಂಪು ಚರ್ಚೆ ತರಗತಿ, ಉನ್ನತ ಅಧಿಕಾರಿಗಳಿಂದ ಸ್ಫೂರ್ತಿದಾಯಕ ಪ್ರೇರಣಾ ತರಗತಿಗಳು, ವ್ಯಕ್ತಿತ್ವ ವಿಕಸನ ತರಗತಿ ಹಾಗೂ ಸಂದರ್ಶನ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ತರಬೇತಿ ನೀಡಲಾಗುವುದು ಎಂದರು.

ಜಿಲ್ಲೆಯ ವಿವಿಧ ಕಾಲೇಜಿನಲ್ಲಿ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ನಮ್ಮ ಟ್ರಸ್ಟ್ ವತಿಯಿಂದ 8 ರಿಂದ 10 ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ಉಚಿತವಾಗಿ ಬುನಾದಿ ತರಬೇತಿಯನ್ನು 2022ರ ಡಿಸೆಂಬರ್ ಮತ್ತು 2023 ಜನವರಿಯಲ್ಲಿ ಆಯೋಜಿಸಲಾಗುವುದು ಎಂದರು.

ಮಂಡ್ಯ ನಗರದ ಕೆ.ಹೆಚ್‌.ಬಿ ಕಾಲೋನಿ, ಕಾರಸವಾಡಿ ರಸ್ತೆ, ಮೊದಲನೇ ಹಂತದಲ್ಲಿ ಸುಸಜ್ಜಿತವಾದ ಆಡಳಿತ ಮತ್ತು ತರಬೇತಿ ಕಟ್ಟಡ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯ ಕಟ್ಟಡ ನಿರ್ಮಿಸಿದ್ದು, ವಿಶಾಲವಾದ ತರಗತಿ ಕೊಠಡಿಗಳು, ಸ್ಕಾರ್ಟ್ ತರಗತಿ ಕೊಠಡಿ, ಕಂಪ್ಯೂಟರ್ ಕಲಿಕಾ ಕೇಂದ್ರ, ಗ್ರಂಥಾಲಯವನ್ನು ಒಳಗೊಂಡಿವೆ ಹಾಗೂ ವಿಶೇಷವಾಗಿ ಉತ್ತಮ ವಿಷಯ ತಜ್ಞ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ಹೊಂದಿದೆ ಎಂದ ಅವರು, ಹೆಚ್ಚಿನ ಮಾಹಿತಿಗಾಗಿ ದೂ.08232-231140, ವ್ಯವಸ್ಥಾಪಕ ಲಕ್ಷ್ಮಣ್ ಮೊ.99022-41722 ಸಂಪರ್ಕಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಎ.ಎಂ.ಅಣ್ಣಯ್ಯ, ಮುಖ್ಯ ಸಂಚಾಲಕ ಡಾ.ಕೆ.ಬಿ.ಬೋರಯ್ಯ, ಟ್ರಸ್ಟಿ ಲೋಕೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!