Friday, September 13, 2024

ಪ್ರಾಯೋಗಿಕ ಆವೃತ್ತಿ

ಸೋಲಿನ ಹೊಣೆ ನಾವೇ ಹೊರುತ್ತೇವೆ

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಆದ ಸೋಲಿಗೆ ನಾವೇ ಹೊಣೆ ಹೊರುತ್ತೇವೆ ಎಂದು ಜೆಡಿಎಸ್ ನಾಯಕರಾದ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಜೆಡಿಎಸ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿರಿಯ ನಾಯಕ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಅಗಲಿಕೆಯ ಅನುಕಂಪ ಸದ್ದಿಲ್ಲದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.ಜೊತೆಗೆ ಹಣಬಲ ಕೆಲಸ ಮಾಡಿರುವುದು ಮಧು ಮಾದೇಗೌಡ ಅವರ ಗೆಲುವಿಗೆ ಕಾರಣವಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಅನುಕಂಪದ ರಾಜಕಾರಣದ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಂಡಿಸಿದ್ದೇಗೌಡ, ಎಸ್. ಡಿ. ಜಯರಾಮ್, ಕೆ.ಎನ್.ನಾಗೇಗೌಡ, ಎಂ.ಎಸ್.ಸಿದ್ದರಾಜು, ಮಂಚೇಗೌಡ ಅವರುಗಳ ಮರಣಾನಂತರ ಅವರ ಪತ್ನಿಯರು ಚುನಾವಣೆಗಳಲ್ಲಿ ಗೆದ್ದಿರುವ ಇತಿಹಾಸವಿದೆ.ಅದರಂತೆ ಮಧು ಅವರು ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೇರೆ ಬೇರ ಪಕ್ಷಗಳ ಮತಗಳು ಸಿಗುತ್ತದೆ. ಆದರೂ ಈ ಬಾರಿಯ ಸೋಲು ನನ್ನ ಮನಸ್ಸನ್ನು ಕಲಕಿದೆ. ತಳಸ್ಪರ್ಶಿ ನೆಲೆಯಲ್ಲಿ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ. ಯಾರೂ ಆತ್ಮಸ್ಥೈರ್ಯ,ಅಧೈರ್ಯಕ್ಕೆ ಒಳಗಾಗಬೇಡಿ ಎಂದರು.

ರಾಮು ಅವರಿಗೆ ಪಕ್ಷ ರಾಜಕಾರಣ ಹೊಸದು.ಆದರೆ ಚುನಾವಣಾ ರಾಜಕಾರಣ ಹೊಸದಲ್ಲ.ಪಕ್ಷದ ಸಂಘಟನೆ ಜೊತೆಗೆ ಆರು ತಿಂಗಳು ಮುಂಚಿತವಾಗಿ ಬಿ.ಫಾರಂ ಸಿಕ್ಕಿತ್ತು.ನಾಲ್ಕು ಜಿಲ್ಲೆಗಳಲ್ಲಿ ಐದು ಬಾರಿ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಮಾಡಿದೆವು.ಆದರೂ ನಾವು ಸೋತೆವು.ಈ ಸೋಲಿಗೆ ಕಾರ್ಯಕರ್ತರು, ಪದವೀಧರ ಮತದಾರರನ್ನು ಹೊಣೆ ಮಾಡುವುದಿಲ್ಲ.ರಾಮು ಅವರ ಸೋಲಿಗೆ ನಾವೆಲ್ಲರೂ ಹೊಣೆ ಎಂದು ಹೇಳಿದರು.

ಪರಾಜಿತ ಅಭ್ಯರ್ಥಿ ಹೆಚ್.ಕೆ.ರಾಮು ಮಾತನಾಡಿ,ವೈಯಕ್ತಿಕ ತಪ್ಪಿನಿಂದ ಸೋಲಾಗಿದೆ.ಸೋಲು -ಗೆಲುವನ್ನು ಸಮನಾಗಿ ಸ್ವೀಕರಿಸಿ ಜೆಡಿಎಸ್‌ ಪಕ್ಷದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಜೆಡಿಎಸ್ ಪಕ್ಷಕ್ಕೆ ಇಷ್ಟು ಮತ ಲಭಿಸಿದೆ.ಮುಂದೆಯೂ ಜೆಡಿಎಸ್ ಪಕ್ಷದ್ದಲ್ಲೇ ಇದ್ದು ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರ ಶಿಫಾರಸ್ಸಿನ ಮೇರೆಗೆ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿಕೊಟ್ಟಿತ್ತು.ಇದಕ್ಕೆ ಜೆಡಿಎಸ್ ವರಿಷ್ಠರಿಗೆ ಹಾಗೂ ಹಗಲಿರುಳು 10 ತಿಂಗಳಿಂದ ನನ್ನ ಪರವಾಗಿ ದುಡಿದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಹದೇವು,ನಿಂಗೇಗೌಡ, ಶಿವರಾಮ್,ನೀನಾ ಪಟೇಲ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!