Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ ಚುನಾವಣೆ| ಎರಡು ಹಂತದ ಮತದಾನದ ಡೇಟಾ ಬಿಡುಗಡೆ ವಿಳಂಬ: ವಿವರಣೆ ನೀಡಲು ವಿಪಕ್ಷಗಳ ಆಗ್ರಹ

ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನವು ನಡೆದ ಸುಮಾರು 11 ದಿನಗಳ ನಂತರ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಂತಿಮವಾಗಿ ಮಂಗಳವಾರ ಅಧಿಕೃತ ಒಟ್ಟಾರೆ ಮತದಾನದ ಡೇಟಾ ಬಿಡುಗಡೆ ಮಾಡಿದ್ದು ವಿಳಂಬಕ್ಕೆ ವಿವರಣೆ ನೀಡಲು ವಿಪಕ್ಷಗಳು ಆಗ್ರಹಿಸಿದೆ.

ಚುನಾವಣಾ ಆಯೋಗದ ಪ್ರಕಾರ ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ. ಮೊದಲ ಹಂತಕ್ಕಿಂತ ಕೊಂಚ ಅಧಿಕ ಮತದಾನ ಎರಡನೇ ಹಂತದಲ್ಲಿ ನಡೆದಿದೆ.

ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಎರಡನೇ ಹಂತದಲ್ಲಿ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇನ್ನು 2019 ರ ಮೊದಲ ಹಂತದ ಮತದಾನದಲ್ಲಿ ಶೇಕಡ 69.43ರಷ್ಟು ಮತದಾನವಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಅದಕ್ಕಿಂತ ಕಡಿಮೆ ಮತದಾನವಾಗಿದೆ.

ಮತದಾನದ ಸಂಪೂರ್ಣ ವಿವರ

ಅಧಿಕೃತ ಅಂಕಿಅಂಶಗಳ ಪ್ರಕಾರ, ಮೊದಲ ಹಂತದಲ್ಲಿ ಪುರುಷರು ಶೇಕಡ 66.22, ಮಹಿಳೆಯರು ಶೇಕಡ 66.07 ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಶೇಕಡ 31.32ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಶೇಕಡ 66.14 ರಷ್ಟು ಮತದಾನವಾಗಿದೆ. ಈ ಹಂತದ ಮತದಾನ ಏಪ್ರಿಲ್ 19 ರಂದು ನಡೆದಿದೆ.,

ಏಪ್ರಿಲ್ 26 ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಪುರುಷರು ಶೇಕಡ 66.99, ಮಹಿಳೆಯರು ಶೇಕಡ 66.42 ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಶೇಕಡ 23.86ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆ ಶೇಕಡ 66.71ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಮೊದಲ ಹಂತದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಇಲ್ಲಿ ಶೇಕಡ 49.26ರಷ್ಟು ಮತದಾನವಾಗಿದೆ. ಇನ್ನು ಎರಡನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಶೇಕಡ 55.19ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ಮತದಾನ ನಡೆದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿದೆ. ಈ ಪೈಕಿ ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ತಮಿಳುನಾಡು, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣೆ ನಡೆದಿದೆ. ಅಸ್ಸಾಂ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯದಲ್ಲಿ ಅಧಿಕ ಮಹಿಳೆಯರು ಮತದಾನ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!