Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೋವಿಶೀಲ್ಡ್‌ ಅಡ್ಡ ಪರಿಣಾಮ| ದೇಣಿಗೆಗಾಗಿ ದೇಶದ ಜನರ ಜೀವದೊಂದಿಗೆ ಬಿಜೆಪಿ ಚೆಲ್ಲಾಟ: ಅಖಿಲೇಶ್ ಯಾದವ್

ಕೋವಿಶೀಲ್ಡ್‌ ಲಸಿಕೆಯಿಂದ ಉಂಟಾಗುವ ಅಡ್ಡ ಪರಿಣಾಮದ ವಿವಾದದ ನಡುವೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಲಸಿಕೆ ತಯಾರಿಕೆ ಕಂಪನಿಗಳಿಂದ ರಾಜಕೀಯ ದೇಣಿಗೆಯ ಸುಲಿಗೆಗಾಗಿ ಬಿಜೆಪಿ ಸರ್ಕಾರವು ದೇಶದ ಕೋಟ್ಯಂತರ ಜನರ ಪ್ರಾಣವನ್ನು ಪಣಕ್ಕಿಟ್ಟಿದೆ. ಭಾರತದ ಸುಮಾರು 80 ಕೋಟಿ ಜನರು ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಮೂಲ ತಯಾರಿಕಾ ಕಂಪನಿ ಹೇಳಿರುವಂತೆ ಗಂಭೀರ ಹೃದಯ ಸಮಸ್ಯೆಗಳು ಉಂಟಾಗಲಿವೆ. ಲಸಿಕೆ ಪಡೆದುಕೊಂಡ ಅಡ್ಡ ಪರಿಣಾಮಗಳಿಂದ ಹಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ ಅಲ್ಲದೆ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಭಯ, ಅನುಮಾನಗಳು ಈಗ ಸಾಬೀತಾಗಿದೆ” ಎಂದು ಹೇಳಿದರು.

ಜನರ ಜೀವದ ಜೊತೆ ಆಡವಾಡಿದವರನ್ನು ಸಮಾಜ ಎಂದೂ ಕ್ಷಮಿಸುವುದಿಲ್ಲ. ಕೆಲವರನ್ನು ಕೊಲ್ಲುವ ಪಿತೂರಿಗೆ ಸಾಮಾನವಾದ ಇಂತಹ ಮಾರಕ ಔಷಧಗಳನ್ನು ಅನುಮತಿಸಲಾಗಿದೆ. ಇದಕ್ಕೆ ಜವಾಬ್ದಾರಿಯಾಗಿರುವ ಎಲ್ಲರ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.

ಆಡಳಿತ ಪಕ್ಷವು ಲಸಿಕಾ ತಯಾರಿಕಾ ಕಂಪನಿಗಳಿಂದ ರಾಜಕೀಯ ನೆರವು ಪಡೆಯುವುದಕ್ಕಾಗಿ ಜನರ ಜೀವದ ಜೊತೆ ಚೆಲ್ಲಾಟವಾಡಿದೆ. ಇದಕ್ಕೆ ಕಾನೂನು ಅಥವಾ ಜನತೆ ಕ್ಷಮಿಸುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕಾಗಿದೆ ಎಂದು ಒತ್ತಾಯಿಸಿದರು.

ಕೋವಿಡ್‌ 19ಗೆ ಕೋವಿಶೀಲ್ಡ್‌ ಲಸಿಕೆ ನೀಡಿದ ಇಂಗ್ಲೆಂಡ್ ಮೂಲದ ಫಾರ್ಮಾ ಕಂಪನಿ ಅಸ್ಟ್ರಾ ಜನಿಕಾ ಅತೀ ಅಪರೂಪದ ಸಂದರ್ಭಗಳಲ್ಲಿ ಹೃದಯದಲ್ಲಿ ಮಾರಾಣಾಂತಿಕ ತೊಂದರೆ ಸಂಭವಿಸುತ್ತದೆ ಎಂದು ಕೋರ್ಟ್‌ನಲ್ಲಿ ಒಪ್ಪಿಕೊಂಡಿತ್ತು.

ಅಸ್ಟ್ರಾ ಜನಿಕಾ ಕಂಪನಿಯಿಂದ ಬಿಜೆಪಿ ಪಕ್ಷ 200ರಿಂದ 300 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!