Thursday, September 19, 2024

ಪ್ರಾಯೋಗಿಕ ಆವೃತ್ತಿ

ದೆಹಲಿಯಲ್ಲಿ ಲಘು ಭೂಕಂಪ: ನಡುಗಿದ ನಾಗರೀಕರು

ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಭೂಕಂಪವಾಗಿ ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪ ದಾಖಲಾಗಿದೆ.

ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಭೂಕಂಪದ ಕಂಪನ ಸಂಭವಿಸಿವೆ. ದೆಹಲಿಯ ಅಕ್ಕಪಕ್ಕದ ನಗರಗಳಾದ ನೋಯ್ಡಾ, ಗಾಜಿಯಾಬಾದ್, ಗುರ್‌ಗಾಂವ್‌ನಲ್ಲಿ ನಾಗರೀಕರು ನಡುಗಿ ಹೋಗಿದ್ದಾರೆ. ಭೂಕಂಪವು ಹೆಚ್ಚಾಗಿ ಎತ್ತರದ ನಗರಗಳಲ್ಲಿ ಕಂಡುಬಂದಿದೆ.

“>

ಮುಂಜಾಗ್ರತಾ ಕ್ರಮವಾಗಿ ಅನೇಕ ಜನರು ತಮ್ಮ ಮನೆಗಳಿಂದ ಹೆದರಿ ಹೊರಬಂದಿದ್ದಾರೆ. ಉತ್ತರಾಖಂಡದ ಜೋಶಿಮಠದಿಂದ ಆಗ್ನೇಯಕ್ಕೆ 212 ಕಿಮೀ ದೂರದಲ್ಲಿರುವ ನೇಪಾಳದಲ್ಲಿ 5.4ರಷ್ಟು ಭೂಕಂಪನದ ಕೇಂದ್ರಬಿಂದುವಾಗಿದೆ.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪನವು ನೆರೆಯ ದೇಶದಲ್ಲಿ ಆರು ಜನರನ್ನು ಬಲಿತೆಗೆದುಕೊಂಡ ಮೂರು ದಿನಗಳ ನಂತರ 7.57 ಕ್ಕೆ ಪ್ರದೇಶವು ಮತ್ತೆ ಕಂಪಿಸಿತು. ಒಂದು ವಾರದಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ. ಯಾವುದೇ ಹಾನಿಯ ಬಗ್ಗೆ ತಕ್ಷಣದ ವರದಿ ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದಕ್ಕೂ ಮುನ್ನ ನೇಪಾಳದಲ್ಲಿ ಬುಧವಾರ ಮುಂಜಾನೆ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಆ ಭೂಕಂಪದ ಅನುಭವವು ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಆಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!