Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅವ್ಯವಹಾರ ನಡೆಸಿದ ಪಿಡಿಓಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಶ್ರೀರಂಗಪಟ್ಟಣ ತಾಲೂಕು ತಡಗವಾಡಿ ಗ್ರಾಮ ಪಂಚಾಯಿತಿ ತಡಗವಾಡಿ ಪಂಚಾಯತಿಯಲ್ಲಿ ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ರ್ತವ್ಯ ಲೋಪ, ಹಣ ದುರ್ಬಳಕೆ ಹಾಗೂ ಕಾನೂನು ಉಲ್ಲಂಘನೆ ಮಾಡಿರುವ ಶಿವಲಿಂಗೇಗೌಡ, ತಿಲಕ್ ಕುಮಾರ್ ಹಾಗೂ ನಾಗೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಸದಸ್ಯರು ಮಂಡ್ಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯಿತಿ ಎದುರು ತಡಗವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಜಿ.ಎನ್. ಮಧು ನೇತೃತ್ವದಲ್ಲಿ ಧರಣಿ ನಡೆಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಚಿಕ್ಕಹಾರೋಹಳ್ಳಿ ಗ್ರಾಮದ ಕೆರೆಯ ಹರಾಜು ಪ್ರಕ್ರಿಯೆಯಲ್ಲಿ ಹಣ ದುರ್ಬಳಕೆ ಮಾಡಿದ್ದು, ಬೀದಿ ದೀಪ ಆಳವಡಿಸಿ ವರ್ಷವಾದರೂ ಬಿಲ್ ಪಾವತಿ ಮಾಡದೆ ಇರುವುದು, ಕಾಮಗಾರಿಗಳು ಪೂರ್ಣವಾಗಿ ಆಳತೆ ಪುಸ್ತಕದಲ್ಲಿ ನಮೂದಾಗಿ ವರ್ಷವಾಗಿದ್ದರೂ ಬಿಲ್ ಪಾವತಿ ಮಾಡದಿರುವುದು, ಚೆಸ್ಕಾಂ ಇಲಾಖೆಗೆ ಹಣ ಪಾವತಿ ಮಾಡಲು ಪಂಚಾಯತಿ ಖಾತೆಯಲ್ಲಿ ಹಣ ಇದ್ದರೂ ಸಹ ವರ್ಷಗಟ್ಟಲೆ ವಿಳಂಬ ಮಾಡಿ ಬಡ್ಡಿ, ದಂಡ ಕಟ್ಟುವಂತೆ ಮಾಡಿರುವುದು, ನರೇಗಾ ಕಾಮಗಾರಿಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸದೆ ಲೋಪ ಮಾಡಿದ್ದಾರೆ, ಈ ಬಗ್ಗೆ ತನಿಖೆಯು ಮಂದಗತಿಯಲ್ಲಿ ಸಾಗಿದೆ ಎಂದು ದೂರಿದರು.

ಅದೇ ರೀತಿ ಶಿವಲಿಂಗೇಗೌಡ ಹಾಗೂ ತಿಲಕ್ ಕುಮಾರ್ ಕರ್ತವ್ಯ ಲೋಪ ಹಣ ದುರುಪಯೋಗ ಮಾಡಿರುವ ಬಗ್ಗೆ ದೂರು ಸಲ್ಲಿಸಲಾಗಿದ್ದು, ಮೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ, ಆದರೂ ಸಹ ಕಾನೂನು ಕ್ರಮಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ವೆಂಕಟಮ್ಮ, ಸದಸ್ಯೆ ಶಾಂತ ತಮ್ಮೇಗೌಡ, ಅರವಿಂದ್, ಶಿವಕುಮಾರ್, ಪರಮೇಶ್, ಆಟೋ ಕೃಷ್ಣ, ಹೋರಾಟಗಾರ ಯೋಗೇಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ