ಮಂಡ್ಯ ನಗರದ ಶ್ರಮಿಕ (ಸ್ಲಂ) ನಗರ ನಿವಾಸಿಗಳ ಪ್ರತಿಭಟನೆಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಾಲಹಳ್ಳಿ ನಿವಾಸಿಗಳ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಯವರು ಒಪ್ಪಿಗೆ ನೀಡಿದರೆ, ನಾವು ಹಕ್ಕು ಪತ್ರ ಹಂಚಲು ಸಿದ್ದವಿದ್ದೇವೆ ಎಂದು ಸ್ಲಂ ಬೋರ್ಡ್ ಅಧಿಕಾರಿಗಳು ತಿಳಿಸಿದರು ಎಂದು ಸಂಘಟಕರು ತಿಳಿಸಿದ್ದಾರೆ.
ಹಾಲಹಳ್ಳಿ ಶ್ರಮಿಕ ನಿವಾಸಿಗಳಿಗೆ ಸೋಮವಾರದೊಳಗೆ ಹಕ್ಕು ಪತ್ರ ಮತ್ತು ವಸತಿಯನ್ನು ನೀಡದಿದ್ದರೆ, ಅಲ್ಲಿನ ನಿವಾಸಿಗಳೆಲ್ಲಾ ಈಗ ಕಟ್ಟಿರುವ ಮನೆಗಳಿಗೆ ತಾವೇ ಉದ್ಘಾಟಿಸಿ, ಮನೆ ಸೇರಿಕೊಳ್ಳುತ್ತೇವೆ, ಇನ್ನೂ ನಾವು ಕಾಯಲು ಸಿದ್ದರಿಲ್ಲ. ಇನ್ನಷ್ಟು ಸಾವು ನೋವುಗಳು ಸಂಭವಿಸುವ ಮುನ್ನ ಅಲ್ಲಿನ ನಿವಾಸಿಗಳಿಗೆ ನಿರ್ಮಾಣವಾಗಿರುವ ಕಟ್ಟಡಗಳಿಗೆ ಹೋಗಿ ವಾಸಿಸುತ್ತೇವೆ ಎಂದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.
ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿ, ವಕೀಲರಾದ ಬಿ.ಟಿ.ವಿಶ್ವನಾಥ್ ಜಿಲ್ಲಾಡಳಿತ ಬಡವರು ಕಾನೂನು ಕೇಳಲು ಹೋದರೆ ನೀತಿ ಸಂಹಿತೆ ಅಡ್ಡಿ ಬರುತ್ತದೆ, ಆದರೆ ಇದ್ಯಾವುದು ಶ್ರೀಮಂತರಿಗೆ ಅನ್ವಯವಾಗುವುದಿಲ್ಲ, ಸರ್ಕಾರ ಉಳ್ಳವರ ಪರ ನಿಂತಿದೆ. ಈ ಹೋರಾಟಕ್ಕೆ ಅಲ್ ಇಂಡಿಯಾ ಲಾಯರ್‍ಸ್ ಯೂನಿಯನ್ (AILU) ಸಂಘಟನೆಯು ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.
ಕಾಳಿಕಾಂಭ ದೇವಸ್ಥಾನದ ಹತ್ತಿರವಿರುವ ಶ್ರಮಿಕ ನಿವಾಸಿಗಳಿಗೆ ಪದವೀಧರರ ಚುನಾವಣೆಯು ಮುಗಿದ ನಂತರ ಹತ್ತು ದಿನಗಳೊಳಗೆ ತಾತ್ಕಲಿಕ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆಯನ್ನು ಸ್ಲಂ ಬೋರ್ಡ್ ಅಧಿಕಾರಿಗಳು ನೀಡಿದ್ದಾರೆ. ಆದರೆ, ತಾತ್ಕಲಿಕ ಮನೆಗಳನ್ನು ನೀಡುವುದಾದರೆ ನಮ್ಮ ನಿವಾಸಿಗಳನ್ನು ಊರ ಹೊರಗೆ ಹಾಕಿ, ಸರಿಯಾದ ತಾತ್ಕಲಿಕವಾಗಿ ಮನೆಗಳನ್ನು ನಿರ್ಮಿಸಿಕೊಡುವುದಿಲ್ಲ.
ಆಕ್ರಮವಾಗಿ ಸ್ಲಂ ಜಾಗದಲ್ಲಿ ನಿರ್ಮಾಣ ಮಾಡಿರುವ ಕಾಳಿಕಾಂಭ ಸಮುದಾಯವನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡು ಅಲ್ಲಿನ ನಿವಾಸಿಗಳಿಗೆ ಆ ಸ್ಥಳದಲ್ಲೇ ವಸತಿ ನಿರ್ಮಾಣ ಮಾಡಿಕೊಡಬೇಕು, ಈ ಹಿಂದೆ ಆಗಿದ್ದ ಒಪ್ಪಂದವನ್ನು ಕಾಳಿಕಾಂಭ ಸಮಿತಿಯವರು ಮುರಿದ್ದಿದ್ದಾರೆ. ನಮಗೆ ಅಲ್ಲಿಯೇ ಮನೆಯನ್ನು ನಿರ್ಮಿಸಿಕೊಡಿ, ನಿರ್ಮಿಸಿ ಕೊಡದಿದ್ದರೆ ಕಾಳಿಕಾಂಭ ಸಮುದಾಯದ ಭವನದ ಬಳಿಯೇ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನಗರ ಸಭೆಯಲ್ಲಿ ಈ ಹಿಂದೆ ಇಂದಂತಹ ಆಧಿಕಾರಿಗಳು ನ್ಯೂ ತಮಿಳು ಕಾಲೋನಿಯಲ್ಲಿ 36 ಆಕ್ರಮ ಖಾತೆಯನ್ನು ಮಾಡಿಕೊಟ್ಟಿದ್ದಾರೆ, ಈ ಸಂಬಂಧ ಸ್ಮಂ ಬೋರ್ಡನಿಂದ ನಗರ ಸಭೆಯ ಮೇಲೆ ಕೋರ್ಟ್ ನಲ್ಲಿ ಕೇಸ್ ಹಾಕಲು ಜಿಲ್ಲಾದಿಕಾರಿಯ ಸಭೆಯಲ್ಲಿ ನಿರ್ಣಯವಾಗಿತ್ತು. ಸ್ಲಂ ಬೋರ್ಡ್ ಇವರೆವಿಗೂ ಯಾವುದೇ ರೀತಿಯ ಕೇಸ್ ನ್ನು ಹಾಕಿಲ್ಲ. ಆದ್ದರಿಂದ ನಗರ ಸಭೆಯ ಮುಂದೆ ಪ್ರತಿಭಟನೆ ಮತ್ತು ಮುತ್ತಿಗೆಯನ್ನು ಹಾಕುತ್ತೇವೆ ಎಂದು ಪ್ರತಿಭಟನಾಕಾರರು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.