Friday, September 20, 2024

ಪ್ರಾಯೋಗಿಕ ಆವೃತ್ತಿ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೂಲಿಕಾರರ ಪ್ರತಿಭಟನೆ

ಮದ್ದೂರು ತಾಲ್ಲೂಕಿನ ಭಾರತೀನಗರ ವ್ಯಾಪ್ತಿಯ ಕಾಡುಕೊತ್ತನಹಳ್ಳಿ ಗ್ರಾ.ಪಂ.ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಕೂಲಿಕಾರ್ಮಿಕರ ಸಂಘದ ಗ್ರಾಮ ಸಮಿತಿಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿ ಕೆಲಸ ಸಮರ್ಪಕ ಜಾರಿಗೆ, ಬಾಕಿ ಕೂಲಿ ಪಾವತಿಗಾಗಿ ಹಾಗೂ ಕಾಯಕ ಬಂಧುಗಳ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಹಾಗೂ ಇಂದೇ ಕೆಲಸ ನೀಡಲು ಜಲ ಜೀವನ್ ಮಿಷನ್ ಯೋಜನೆಯಡಿ ವಿರೋಧಿಸಿ,ಪಂಚಾಯತ್ ರಾಜ್ ಕಾಯ್ದೆ ನಿಯಮದಡಿ ನೀರು ಕೊಡಲು ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಗ್ರಾಮ ಪಂಚಾಯತಿ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ತಳಗವಾದಿ ಕೃಷಿ ಕಾರ್ಮಿಕರ ಸಂಘದ ವಲಯ ಸಮಿತಿ ಅಧ್ಯಕ್ಷ ಆನಂದ್ ಕಾಡುಕೊತ್ತನಹಳ್ಳಿ,ಭುಜವಳ್ಳಿ,ಕಪರೆಕೊಪ್ಪಲುಗ್ರಾಮದ ಕೂಲಿ ಕಾರ್ಮಿಕರು ಎರಡು ವಾರಕ್ಕೂ ಹೆಚ್ಚು ಮಾನವ ದಿನಗಳು ಕೆಲಸ ನಿರ್ವಹಿಸಿದ್ದು ಇದುವರೆಗೂ ಕೂಲಿ ಕೊಡದೇ ಎರಡು ವಾರದ ಎನ್ಎಮ್ಆರ್ ಅನ್ನು ಶೂನ್ಯ ಮಾಡುವ ಮೂಲಕ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸುವುದನ್ನು ಕೃಷಿ ಕೂಲಿಕಾರರ ಸಂಘಟನೆ ಗ್ರಾಮ ಸಮಿತಿಗಳ ಸದಸ್ಯರು ತೀವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್, ತಾ.ಉಪಾಧ್ಯಕ್ಷ ಹೊನ್ನಯ್ಯ, ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಗ್ರಾಮ ಘಟಕದ ಅದ್ಯಕ್ಷ ರೇಣುಕಮ್ಮ, ಕಪನಿಗೌಡ, ಮಹದೇವಮ್ಮ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!