Thursday, September 19, 2024

ಪ್ರಾಯೋಗಿಕ ಆವೃತ್ತಿ

ನೋಟು ರದ್ಧತಿ ಕಾನೂನುಬಾಹಿರ ಎಂದ ನ್ಯಾ.ಬಿ.ವಿ.ನಾಗರತ್ನ ಅವರ ಮಂಡ್ಯ ನಂಟು

ನೋಟು ರದ್ದತಿ ಕಾನೂಬಾಹಿರ ಎಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ ಅವರು ನಮ್ಮ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಇಂಗಲಕುಪ್ಪೆ ಗ್ರಾಮದವರು.
ಇಂಗಲಕುಪ್ಪೆ ಗ್ರಾಮದ ಇ.ಎಸ್.ವೆಂಕಟರಾಮಯ್ಯ ಅವರು ಸುಪ್ರೀಂ ಕೋರ್ಟ್ ನ  ನಿವೃತ್ತ ಮುಖ್ಯ ನ್ಯಾಯಮೂರ್ತಿ ಆಗಿದ್ದವರು.ಅವರ ಮಗಳೇ ನ್ಯಾಯಮೂರ್ತಿ ಬಿ.ವಿ.ನಾಗರತ್ನ.

ತಮ್ಮ 124 ಪುಟಗಳ ತೀರ್ಪಿನಲ್ಲಿ ಅವರು ನೋಟು ರದ್ದು ಮಾಡುವ ಕೇಂದ್ರ ಸರ್ಕಾರದ ಉದ್ದೇಶ  ಸೂಕ್ತ ವಾಗಿರಬಹುದು,  ಆದರೆ, ಅದನ್ನು ಜಾರಿಗೊಳಿಸಿದ ರೀತಿ ಮತ್ತು ಆದಕ್ಕೆ ಅನುಸರಿಸಿದ ಪ್ರಕ್ರಿಯೆಗಳು ಕಾನೂನು ಬದ್ಧವಾಗಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಅಮಾನ್ಯೀಕರಣಗೊಂಡ ಶೇ. 98ರಷ್ಟು ಮೊತ್ತವನ್ನು ವಿನಿಮಯ ಮಾಡಲಾಗಿದೆ. ಎಂದು ತಿಳಿಸಿದರು.

ಈ ಕುರಿತು ಸರ್ಕಾರ ಆರ್ ಬಿಐಗೆ ಮಾಹಿತಿ ನೀಡಿತ್ತಾದರೂ ಅವರ ಅಭಿಪ್ರಾಯವನ್ನು ಪರಿಗಣಿಸಿಲ್ಲ ಇಂತಹ ಗಂಭೀರ ನಿರ್ಧಾರದ ವೇಳೆ ಅಭಿಪ್ರಾಯ ತಿಳಿಸಲು ಆ‌ರ್ ಬಿಐಗೆ ಕಾಲಾವಕಾಶ ನೀಡಿಲ್ಲ. ರೂ. 500, 2,000 ನೋಟುಗಳನ್ನು ರದ್ದುಗೊಳಿಸುವ ಸಂಪೂರ್ಣ ಪ್ರಕ್ರಿಯೆ ಕೇವಲ 24 ಗಂಟೆಗಳಲ್ಲಿ ನಡೆದಿದೆ ಎಂಬುದನ್ನು ಇಲ್ಲಿ ಪರಿಗಣಿಸಬೇಕು.ಕೇಂದ್ರ ಸರ್ಕಾರಕ್ಕೆ ಯಾವುದೇ ಕರೆನ್ಸಿಯನ್ನು ಅಮಾನ್ಯಗೊಳಿಸುವ ಅಧಿಕಾರ ಇದೆಯಾದರೂ ಅದನ್ನು ಶಾಸನಬದ್ಧವಾಗಿ ಮಾಡಬೇಕೇ ಹೊರತು ಗೆಜೆಟ್ ಅಧಿಸೂಚನೆ ಮೂಲಕ ಅಲ್ಲ ಎಂದು ಹೇಳಿದರು.

ಸಂಸತ್ತಿನ ಕಾಯ್ದೆ ಪ್ರಕಾರ ರಾಷ್ಟ್ರಪತಿಗಳು
ಜಾರಿಗೊಳಿಸುವ ಸುಗ್ರೀವಾಜ್ಞೆ ಮೂಲಕ ಮಾತ್ರ ಅದನ್ನು ಜಾರಿಗೊಳಿಸಲು ಸಾಧ್ಯ. ಕೇಂದ್ರ ಸರ್ಕಾರಕ್ಕೆ ಗೆಜೆಟ್‌ ಮಾಡುವ ಅಧಿಕಾರ ಇಲ್ಲ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಆರ್‌ಬಿಐ ಅನುಮತಿ ಪಡೆಯಬೇಕು, ಏಕೆಂದರೆ, ದೇಶದಲ್ಲಿ ನೋಟುಗಳ ಹರಿವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಸ್ಥಿರತೆ ಕಾಪಾಡುವ ಏಕೈಕ ಪ್ರಾಧಿಕಾರವೆಂದರೆ ಆರ್ ಬಿಐ, ಯಾವುದೇ ನಿರ್ಧಾರದಿಂದ ದೇಶದ ಆರ್ಥಿಕತೆ ಮೇಲೆ ಬೀರುವ ಪರಿಣಾಮದ ಕುರಿತು ಬ್ಯಾಂಕ್‌ ಗಳು ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಸಿ ಸ್ವತಂತ್ರ ಹಾಗೂ ಮುಕ್ತ ಅಭಿಪ್ರಾಯ ಒದಗಿಸಬೇಕು’ ಎಂದು ಅವರು ಹೇಳಿದರು.

‘ಇದು ದೇಶದಲ್ಲಿ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಹರಿವು ನಿಗ್ರಹಿಸಲು ತೆಗೆದುಕೊಂಡ ಕ್ರಮ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ, ಅವರೆ, ಆಕ್ರಮ ಚಾರಿಗೊಳಿಸಿದ ರೀತಿ ಮಾತ್ರ ಕಾನೂನುಬಾಹಿರವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!