Tuesday, September 17, 2024

ಪ್ರಾಯೋಗಿಕ ಆವೃತ್ತಿ

ಡಿಜಿಟಲ್‌ ಕ್ರಾಂತಿಯಿಂದ ಅಂಚೆ ಇಲಾಖೆಯು ಹೊರತಾಗಿಲ್ಲ – ಲೋಕನಾಥ್

ಈಗ ಜಗತ್ತು ಡಿಜಿಟಲ್ ನತ್ತ ಮುಖಮಾಡಿದ್ದು, ಇದಕ್ಕೆ ಅಂಚೆ ಇಲಾಖೆ ಕೂಡ ಹೊರತಾಗಿಲ್ಲ . ಅಂಚೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ಆಗಿ ಡಿಜಿಟಲ್ ಕ್ರಾಂತಿಯಾಗಿದೆ ಎಂದು ಅಂಚೆ ಇಲಾಖೆಯ ಅಧೀಕ್ಷಕ ಎಂ.ಲೋಕನಾಥ್ ತಿಳಿಸಿದರು.

ಮಂಡ್ಯನಗರದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘ, ಕರ್ನಾಟಕ ವಲಯ ಸಂಘ ಹಾಗೂ ಮಂಡ್ಯ ವಿಭಾಗೀಯ ಸಂಘಟನೆಯ ಆಶ್ರಯದಲ್ಲಿ ನಡೆದ ಎರಡು ದಿನಗಳ ವಿಭಾಗೀಯ ಕಾರ್ಯದರ್ಶಿಗಳ ವಿಶೇಷ ಕಾರ್ಯಾಗಾರ ಹಾಗೂ ಜಂಟಿ ಕಾರ್ಯಕಾರಿ ಸಮಿತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಂಚೆ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡಾಗಿದೆ. ಅದಕ್ಕೆ ಇಲಾಖೆ ನೌಕರರು ಹೊಂದಿಕೊಂಡು ಕೆಲಸ ನಿರ್ವಹಿಸಿ ಸಾರ್ವಜನಿಕ ಸೇವೆ ಮಾಡಬೇಕು. ಈಗಾಗಲೇ ಡಿಜಿಟಲ್ ಗೆ ಹೊಂದಿಕೊಂಡು ಕೆಲಸ ಮಾಡುತ್ತಿರುವವರು ಸಾಕಷ್ಟು ನೌಕರರು ಇದ್ದಾರೆ. ಇಲಾಖೆಯಲ್ಲಿ ಇದೇ ತರಹದ ಕಾರ್ಯಗಾರಗಳು ನಡಿಯುತ್ತಿರಲಿ. ಇದೊಂದು ಉತ್ತಮ ಕಾರ್ಯಗಾರವಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಿ ಇಲಾಖೆಯ ಕಾರ್ಯಗಾರಕ್ಕೆ ನಿಮ್ಮ ಸಹಕಾರ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿ.ಪಿ.ಎಂ.ಜಿ ಎಸ್ ರಾಜೇಂದ್ರ ಕುಮಾರ್, ದಕ್ಷಿಣ ವಲಯದ ಸುರೇಶ್ ಗುಪ್ತ, ನಿವೃತ್ತ ಮಹಾಪ್ರಧಾನ ಕಾರ್ಯದರ್ಶಿ ಡಿ.ತ್ಯಾಗರಾಜನ್, ಸಂಪನ್ಮೂಲ ವ್ಯಕ್ತಿಗಳಾದ ಡಿ.ಬಸವರಾಜು, ಶ್ರೀಕಾಂತ್, ಸಹಾಯಕ ಅಂಚೆ ಅಧಿಕ್ಷಕ ಬಿ.ಟಿ ಹರೀಶ್, ನಿವೃತ್ತ ನಿರ್ದೇಶಕ ಡಿ.ಎನ್ ನರಸಿಂಹ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!