Friday, September 20, 2024

ಪ್ರಾಯೋಗಿಕ ಆವೃತ್ತಿ

ಖಿನ್ನತೆಗೆ ಒಳಗಾಗಿರುವುದು ಸಂತ್ರಸ್ಥೆಯರು !!

ಪೆನ್ ಡ್ರೈವ್ ‌ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ನಂತರ ಸಾರ್ವಜನಿಕವಾಗಿ ವೀಡಿಯೋ ಮೂಲಕ ಕಾಣಿಸಿ ಕೊಂಡಿದ್ದು, ತಾನು ಸದರಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳಿಂದ ಮನನೊಂದು ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿದ್ದಾನೆ.

ಆದರೆ ವಾಸ್ತವದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ಖಿನ್ನತೆಗೆ ಒಳಗಾಗಿರುವುದಲ್ಲ, ಬದಲಿಗೆ ಆತನಿಂದ ಲೈಂಗಿಕ ಶೋಷಣೆಗೆ ಒಳಪಟ್ಟಿರುವ ನೂರಾರು ಹೆಣ್ಣುಮಕ್ಕಳ ವೀಡಿಯೋ ವೈರಲ್ ಆದ ನಂತರ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದು, ಸಮಾಜದ ಕಣ್ಣುಗಳಿಂದ ತಪ್ಪಿಸಿಕೊಳ್ಳಲಾಗದೆ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹಲವು ಮನಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ತನ್ನ ರಾಜಕೀಯ ಅಧಿಕಾರ,ಕುಟುಂಬದ ಪ್ರಭಾವದಿಂದ ತನ್ನದೇ ಪಕ್ಷದ ಮಹಿಳಾ ಕಾರ್ಯಕರ್ತೆಯರು,ಮಹಿಳಾ ಅಧಿಕಾರಿಗಳು, ತನ್ನ ಮನೆಯಲ್ಲಿ ಕೆಲಸ ಮಾಡುವ ಹಿರಿಯ ಮಹಿಳೆಯರನ್ನು ಬಿಡದೆ ಲೈಂಗಿಕವಾಗಿ ಶೋಷಣೆ ನಡೆಸಿದ ವೀಡಿಯೋ ವೈರಲ್ ಆದ ನಂತರ ಅದರಲ್ಲಿರುವ ನೂರಾರು ಸಂತ್ರಸ್ತೆಯರು ನಿಜವಾಗಿಯೂ ನೊಂದು,ಮಾನಸಿಕ ಖಿನ್ನತೆಗೆ ಜಾರಿದ್ದಾರೆ.ಸಂತ್ರಸ್ಥ ಮಹಿಳೆಯರು ಕುಟುಂಬದ ಸದಸ್ಯರು, ಸಮಾಜದ ಮುಂದೆ ಮುಖ ತೋರಿಸಲಾಗದೆ ಆತ್ಮಹತ್ಯೆ ಯತ್ನ ಕೂಡಾ ಮಾಡಿದ್ದಾರೆ.ಸರ್ಕಾರಿ ಮಹಿಳಾ ಸಿಬ್ಬಂದಿಗಳು,ಅಧಿಕಾರಿಗಳು ಆಫೀಸಿಗೆ ಧೀರ್ಘ ರಜೆ ಹಾಕಿ ಮನೆಯಲ್ಲಿದ್ದಾರೆ.ತನ್ನದೇ ಆಫೀಸಿನ ಸಹದ್ಯೋಗಿಗಳ ಮುಂದೆ ಬಂದು ಮುಖ ತೋರಿಸಲಾಗದ ಅಸಹಾಯಕ ಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ತನ್ನದೇ ಪಕ್ಷದ ಮಹಿಳಾ ಕಾರ್ಯಕರ್ತೆಯರನ್ನು ಬಿಡದ ಪ್ರಜ್ವಲ್ ರೇವಣ್ಣ ಅವರ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿರುವುದರಿಂದ ಅವರು ಕಾರ್ಯಕರ್ತರ ಎದುರು ನಿಲ್ಲಲಾಗದ ದುಸ್ಥಿತಿಗೆ ತಂದಿದ್ದಾನೆ.ಅವರೆಲ್ಲರೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಎದುರು, ಸಮಾಜದಲ್ಲಿ ತಲೆಯೆತ್ತಲಾಗದಂತೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು ಮನೆಗಳಿಂದ ಇನ್ನೂ ಹೊರ ಬರದಂತೆ ಮಾಡಿದ್ದಾನೆ.ಸಮಾಜದಲ್ಲಿರು ಪುರುಷರ ಕಾಮದ ನೋಟವನ್ನು ಎದುರಿಸಲಾಗದೆ ಖಿನ್ನತೆಗೆ ಒಳಗಾಗಿರುವ ಸಂತ್ರಸ್ತೆಯರ ಬದುಕು ಶೋಚನೀಯವಾಗಿದೆ.

ಸಾರ್ವಜನಿಕವಾಗಿ,ಮುಕ್ತವಾಗಿ ಓಡಾಡುತ್ತಿದ್ದ ಮಹಿಳೆಯರು ಪೆನ್ ಡ್ರೈವ್ ಹೊರಗೆ ಬಂದ ನಂತರ ಸಂತ್ರಸ್ತೆಯರು ಹೊರಗೆ ಓಡಾಡುವುದನ್ನೆ ನಿಲ್ಲಿಸಿದ್ದಾರೆ.ಸಮಾಜದಲ್ಲಿರುವ ಪುರುಷರ ಕಾಮ ದೃಷ್ಟಿ ಎದುರಿಸಲಾಗದೆ ತಮ್ಮ ಮಕ್ಕಳು,ಕುಟುಂಬದ ಸದಸ್ಯರ ಮುಂದೆ ಕಣ್ಣೀರು ಹಾಕುತ್ತಿರುವ ಸಂತ್ರಸ್ತೆಯರು ನಿಜವಾಗಿಯೂ ಖಿನ್ನತೆಗೆ ಒಳಗಾದವರೇ ಹೊರತು ಪ್ರಜ್ವಲ್ ರೇವಣ್ಣ ಅಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!