Sunday, November 22, 2026

ಪ್ರಾಯೋಗಿಕ ಆವೃತ್ತಿ

ಧಾರಾಕಾರ ಮಳೆಗೆ ಸಂಪರ್ಕ ರಸ್ತೆ ಜಲಾವೃತ

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಚಂದಗಿರಿ ಕೊಪ್ಪಲು ಗ್ರಾಮದ ಬಳಿ ಲೋಕಪಾವನಿ ನದಿ ತುಂಬಿ ಹರಿಯುತ್ತಿದೆ.

ಇದರಿಂದಾಗಿ ಚಂದಗಿರಿ ಕೊಪ್ಪಲು ಮತ್ತು ಸಬ್ಬನಕುಪ್ಪೆ ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಮೇಲೆ‌ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು ಈ ರಸ್ತೆ ಬಳಸುವ ಬಲ್ಲೇನಹಳ್ಳಿ, ಚಂದಗಿರಿಕೊಪ್ಪಲು ಗ್ರಾಮಗಳ ಜನ ಸಬ್ಬನಕುಪ್ಪೆಗೆ ಬರಲು ಪರದಾಡುವಂಥಾಗಿದೆ.

ನಾಗಮಂಗಲ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಲೋಕ ಪಾವನಿ ನದಿ ತುಂಬಿ ಹರಿಯುತ್ತಿದೆ.ಇದರಿಂದಾಗಿ ರೈತರ ಜಮೀನಿಗೆ ನೀರು ನುಗ್ಗಿದ ಪರಿಣಾಮ ಭತ್ತ,ರಾಗಿ,ತರಕಾರಿ,ತೆಂಗು,ಅಡಿಕೆ ಬೆಳೆ ಜಲಾವೃತಗೊಂಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ