Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಿಗಲಿದೆ

ಪ್ರತಿಯೊಬ್ಬ ಮನುಷ್ಯನು ಧರ್ಮ ಮಾರ್ಗದಲ್ಲಿ ನಡೆದರೆ, ಅವನು ಜೀವನದಲ್ಲಿ ನೆಮ್ಮದಿಯಿಂದ ಬದುಕು ನಡೆಸಬಹುದು ಎಂದು ಶಾಸಕ ಡಿ.ಸಿ.ತಮ್ಮಣ್ಣ ಅಭಿಪ್ರಾಯ ಪಟ್ಟರು.

ಮದ್ದೂರು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಭಾರತದಲ್ಲಿರುವ ಕುರುಕ್ಷೇತ್ರ ಬರೀ ಪುರಾಣಕ್ಕೆ ಸಂಬಂಧಪಟ್ಟದ್ದಲ್ಲ. ಇದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ನಡೆಯುತ್ತಿದೆ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ತಿಳಿಸಿದ್ದು, ಸತ್ಯವಾಗಿದೆ ಎಂದರು.

ನಮ್ಮ ಮನಸ್ಸು ಕೃಷ್ಣನ ತರ ಸಾರಥ್ಯ ವಹಿಸಬೇಕು. ಅರ್ಜುನ ತರ ಮನೋಬಲದಿಂದ ಎಲ್ಲವನ್ನು ಗೆಲ್ಲಿಸಬೇಕು. ದುಷ್ಟ ಶಕ್ತಿಗಳು ಜಾಸ್ತಿ ಆದಾಗೆಲ್ಲ ಅಧರ್ಮ ಹೆಚ್ಚಾಗುತ್ತದೆ. ಧರ್ಮವನ್ನು ಯಾರು ಪಾಲನೆ ಮಾಡುತ್ತಾರೆ. ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು.

ಗಂಡು ಮೆಟ್ಟಿನ ನಾಡು ಮಂಡ್ಯ ಜಿಲ್ಲೆ ನಾಟಕ ಕಲೆಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಜಿಲ್ಲೆ ಹಾಗೂ ತಾಲೂಕಿನಾದ್ಯಂತ ವರ್ಷದಲ್ಲಿ ಒಂದು ತಿಂಗಳ ಕಾಲ ಎಲ್ಲಾ ಕಡೆ ನಾಟಕೋತ್ಸವಗಳು ನಡೆಯುತ್ತದೆ ಎಂದರು.

ಶಾಸಕ ತಮ್ಮಣ್ಣನವರು ಕುರುಕ್ಷೇತ್ರ ನಾಟಕವನ್ನು ವೀಕ್ಷಣೆ ಮಾಡುವ ಮೂಲಕ ಕಲಾವಿದರನ್ನುಪ್ರೋತ್ಸಾಹಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವುರವರನ್ನು ಶಾಸಕ ಡಿ.ಸಿ.ತಮ್ಮಣ್ಣ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಕುರುಕ್ಷೇತ್ರ ನಾಟಕವನ್ನು ಕಲಾ ಅಭಿಮಾನಿಗಳು ವೀಕ್ಷಿಸಿ ಪ್ರೋತ್ಸಾಹಿಸಿ ರಂಜಿಸಿದರು.

ವೇದಿಕೆಯಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶ್ರೀಕಂಠು. ಪುರಸಭಾ ಮಾಜಿ ಅಧ್ಯಕ್ಷ ಮರಿಗೌಡ, ಅಧಿಕಾರಿ ಚೇತನ್ ಕುಮಾರ್, ಪುರಸಭಾ ಮುಖ್ಯ ಅಧಿಕಾರಿ ಅಶೋಕ್, ಶಿವಪುರ ಮಹಾಲಿಂಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ. ಬಿ.ಪಿ ಶಿವಪ್ಪ. ಅಬಕಾರಿ ಅಧಿಕಾರಿ ಶಿವಣ್ಣ. ಸೇರಿದಂತೆ ಹಲವರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!