Monday, November 23, 2026

ಪ್ರಾಯೋಗಿಕ ಆವೃತ್ತಿ

ಮಧುಮೇಹ ಒಂದು ಕಾಯಿಲೆಯಲ್ಲ, ಆರೋಗ್ಯ ಸಮಸ್ಯೆ : ಕೆ.ಟಿ.ಹನುಮಂತು

ಮಧುಮೇಹ ಒಂದು ಕಾಯಿಲೆಯಲ್ಲ, ಬದಲಾದ ಜೀವನಶೈಲಿಯ ಆರೋಗ್ಯ ಸಮಸ್ಯೆ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್‌ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ಮಂಡ್ಯನಗರದ ಅಶೋಕನಗರದ ಆಕೃತಿ ಆಸ್ಪತ್ರೆಯ ಆವರಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಸ್ನೇಹ ಬಳಗ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ-೨೦೨೫ರ ಅರಿವು, ಉಚಿತ ತಪಾವಣೆ, ವೈದ್ಯರೊಡನೆ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿನ ಮನುಷ್ಯರಲ್ಲಿ ಮಧುಮೇಹ ದಿನೇ ದಿನೇ ಹೆಚ್ಚಾಗುತ್ತಿದೆ, ಬದಲಾದ ಆಹಾರ ಮತ್ತು ಜೀವನ ಶೈಲಿಯಿಂದ ಆರೋಗ್ಯ ಯೋಗ ಕ್ಷೇಮ ಕುಂಠಿತವಾಗುತ್ತಿದೆ, ವಿಶ್ವದಲ್ಲಿ ಭಾರತದೇಶ ಮಧುಮೇಹಿಗಳ ರಾಜಧಾನಿಯಾಗಿದೆ ಎಂದು ನುಡಿದರು.

೨೦೨೫ರ ಘೋಷವಾಕ್ಯದಲ್ಲಿ “ಮಧುಮೇಹ ಮತ್ತು ಯೋಗಕ್ಷೇಮ” ಆಗಿದೆ, ಇದು ಕೆಲಸದ ಸ್ಥಳದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಮತ್ತು ಬೆಂಬಲವನ್ನು ನೀಡುವ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ತಿಳಿಸಿದರು.

೧೯೨೨ರಲ್ಲಿ ವಿಜ್ಞಾನಿ ಚಾರ್ಲ್ಸ್ ಬೆಸ್ಟ್ ಜೊತೆಗೆ ಇನ್ಸುಲಿನ್ ಅನ್ನು ಸಹ ಸಂಶೋಧಿಸಿದ ಸರ್ ಫ್ರೆಡೆರಿಕ್ ಬ್ಯಾಂಟಿAಗ್ ಅವರ ಜನ್ಮದಿನದ ಸ್ಮರಣಾರ್ಥ ನ.೧೪ ರಂದು ವಿಶ್ವ ಮಧುಮೇಹ ದಿನವನ್ನು ಆಯ್ಕೆ ಮಾಡಿ, ವಿಶ್ವದ ಎಲ್ಲಾ ರಾಷ್ಟçಗಳು ಆಚರಿಸಿ, ಅರಿವು ಹೆಚ್ಚಿಸುತ್ತಿದ್ದಾರೆ, ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿಗೆ ನೊಬೆಲ್ ಪುರಸ್ಕಾರ ಲಭ್ಯವಾಗಿದೆ ಎಂದು ಹೇಳಿದರು.

ವಿಶ್ವದಲ್ಲಿ ೮೭೨ ಮಿಲಿಯನ್ ಜನ ಮಧುಮೇಹದಿಂದ ಬಳಲುತ್ತಿದ್ದಾರೆ, ಭಾರತದಲ್ಲಿ ಸುಮಾರು ೧೨ ಮಿಲಿಯನ್ ಜನ ಮಧುಮೇಹಿಗಳಿದ್ದಾರೆ, ಸಾವುಗಳಿಗೆ ೧೦ ಪ್ರಮುಖ ಕಾರಣಲ್ಲಿ ಮಧುಮೇಹವೂ ಒಂದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿತು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಬಿ.ಶೃತಿ, ಡಾ.ಸೋನಾಲಿ ಉಚ್ಚಿಲ್, ಡಾ.ಸುಹಾಸ್, ಅಲಯನ್ಸ್ ಸಂಸ್ಥೆ ೨ನೇ ಉಪರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಅಧ್ಯಕ್ಷ ಶಂಕರ್, ಜೋಗಿಗೌಡ, ಲೋಕೇಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ