Friday, September 20, 2024

ಪ್ರಾಯೋಗಿಕ ಆವೃತ್ತಿ

ಶಿಥಿಲಗೊಂಡ ದೇವಾಲಯಗಳ ಜೀರ್ಣೋದ್ಧಾರಕ್ಕೆ ಒತ್ತಾಯ

  • ಶಿಥಿಲಗೊಂಡಿರುವ ದೇವಾಲಯಗಳನ್ನು ಕೂಡಲೇ ಜೀರ್ಣೋದ್ಧಾರ
  • ಶ್ರೀನಿಧಿ ಗೋಲ್ದ್ ಜಗನ್ನಾಥ ಶೆಟ್ಟಿ ವಜಾಕ್ಕೆ ಆಗ್ರಹ

ಮಂಡ್ಯ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶಿಥಿಲಗೊಂಡಿರುವ ದೇವಾಲಯಗಳನ್ನು ಕೂಡಲೇ ಜೀರ್ಣೋದ್ಧಾರ ಮಾಡಿಸಬೇಕೆಂದು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಡಿ.ಕೆ.ಶ್ರೀನಿವಾಸ ಮೂರ್ತಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಒಟ್ಟು 2000 ಕ್ಕೂ ಹೆಚ್ಚು ಸಿ ದರ್ಜೆಯ ದೇವಾಲಯಗಳಿದ್ದು, ಈ ಪೈಕಿ 1200 ದೇವಾಲಯಗಳ ಮೇಲ್ಚಾವಣಿ ಈಗ ಸುರಿದಿರುವ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿಗೆ ಎಂದು ಸುದ್ದಿಗೋಷ್ಟಿಯಲ್ಲಿ ದೂರಿದರು.

ಕೆಲವು ದೇವಾಲಯಗಳಲ್ಲಿ ಬ್ರಹ್ಮ ರಥೋತ್ಸವ ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದರು.

ಶ್ರೀನಿಧಿ ಗೋಲ್ದ್ ಜಗನ್ನಾಥ ಶೆಟ್ಟಿ ವಜಾಕ್ಕೆ ಆಗ್ರಹ

ಹನಿಟ್ರ್ಯಾಪ್ ಲೈಂಗಿಕ ಹಗರಣದಲ್ಲಿ ಸಿಲುಕಿ ಆರೋಪ ಎದುರಿಸುತ್ತಿರುವ ಶ್ರೀನಿಧಿ ಗೋಲ್ದ್ ಮಾಲೀಕ ಜಗನ್ನಾಥ ಶೆಟ್ಟಿ ಅವರನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕೆಂದು ಟ್ರಸ್ಟ್ ನ ಕಾರ್ಯದರ್ಶಿ ಪ್ರಸಾದ್ ಹಲಗೂರು ಆಗ್ರಹಿಸಿದರು.

ಲೈಂಗಿಕ ಹಗರಣದ ಆರೋಪಿ ಧಾರ್ಮಿಕ ಪರಿಷತ್ತಿನಲ್ಲಿ ಗುರುತಿಸಿಕೊಂಡಿರುವುದು ದೊಡ್ಡ ಕಳಂಕವಾಗಿದೆ. ಈ ಧಾರ್ಮಿಕ ಪರಿಷತ್ತುಗಳಲ್ಲಿ ದೇವಾಲಯಗಳನ್ನು ರಕ್ಷಣೆ ಮಾಡುವ ಬಗ್ಗೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ,

ಧಾರ್ಮಿಕ ಪರಿಷತ್ತಿನಲ್ಲಿ ಇರುವವರು, ದೇವಾಲಯಗಳ ಕಾಮಗಾರಿಗಳನ್ನು ಪಡೆದು ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ, ಹಾಗಾಗಿ ಇಂತಹ ಪರಿಷತ್ ಗಳನ್ನು ರದ್ಧುಪಡಿಸಬೇಕೆಂದು ಎಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಎನ್.ರಂಗಸ್ವಾಮಿ, ಎಸ್. ಸಂತೋಷ್ ಕುಮಾರ್, ಲಕ್ಷ್ಮಿ ನಾರಾಯಣ್ , ಮಧು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!