Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 1 ಲಕ್ಷ ರೈತರಿಗೆ ₹650 ಕೋಟಿ ಬೆಳೆ ಸಾಲ ವಿತರಣೆ: ದಿನೇಶ್ ಗೂಳಿಗೌಡ

ಆಡಳಿತರೂಢ ಕಾಂಗ್ರೆಸ್ ಪಕ್ಷವು ರೈತರ ಹಾಗೂ ಜನಸಾಮಾನ್ಯರ ಪಕ್ಷ ಎಂಬುದನ್ನು ಪದೇ ಪದೆ ಸಾಬೀತು ಮಾಡುತ್ತಲೇ ಬರುತ್ತಿದೆ. ಈಗಾಗಲೇ 5 ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನೆ-ಮನವನ್ನು ಮುಟ್ಟಿರುವ ಕಾಂಗ್ರೆಸ್ ಸರ್ಕಾರವು ರೈತರ ಅಭ್ಯುದಯಕ್ಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ಇದಲ್ಲದೇ ಮಂಡ್ಯ ಜಿಲ್ಲೆಯೊಂದರಲ್ಲೇ ಸಹಕಾರ ಕೇಂದ್ರ ಬ್ಯಾಂಕ್ ಮೂಲಕ ₹ 650 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಮದ್ದೂರು ತಾಲೂಕಿನ ನಿಲುವಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದಂತಹ ಮಾರಸಿಂಗನಹಳ್ಳಿಯ ಸುಧಾಕರ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ 7 ತಾಲೂಕುಗಳಲ್ಲಿ ಒಟ್ಟು 234 ಪ್ಯಾಕ್ಸ್ (ಸಹಕಾರ ಸಂಘಗಳು) ಇವೆ. ಇವುಗಳ ಮೂಲಕ ಒಟ್ಟು 1,00,564 ರೈತರಿಗೆ 650.80 ಕೋಟಿ ರೂಪಾಯಿಯನ್ನು 2023ರ ಏಪ್ರಿಲ್ 1ರಿಂದ 2024ರ ಜನವರಿ 18ರ ವರೆಗಿನ ಅವಧಿಗೆ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯ ತಾಲೂಕಿನಲ್ಲಿ 49 ಸಹಕಾರ ಸಂಘಗಳಿದ್ದು, ಅದರಲ್ಲಿ 21,663 ರೈತರಿಗೆ 139.41 ಕೋಟಿ ರೂಪಾಯಿ ಸಾಲ ನೀಡಲಾಗಿದ್ದರೆ, ಮದ್ದೂರು ತಾಲೂಕಿನ 54 ಸಹಕಾರ ಸಂಘಗಳ ಮೂಲಕ 19000 ರೈತರಿಗೆ 139.73 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಮಳವಳ್ಳಿಯ 37 ಸಹಕಾರ ಸಂಘಗಳ ಮೂಲಕ 13726 ರೈತರಿಗೆ 102.55 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಪಾಂಡವಪುರದ 24 ಸಹಕಾರ ಸಂಘಗಳ ಮೂಲಕ 7514 ರೈತರಿಗೆ 51.22 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಶ್ರೀರಂಗಪಟ್ಟಣದ 23 ಸಹಕಾರ ಸಂಘಗಳ ಮೂಲಕ 9165 ರೈತರಿಗೆ 64.96 ಕೋಟಿ ರೂಪಾಯಿ ಬೆಳೆ ಸಾಲವನ್ನು ಕೊಡಲಾಗಿದೆ. ಕೆ.ಆರ್. ಪೇಟೆಯ 30 ಸಹಕಾರ ಸಂಘಗಳ ಮೂಲಕ 22000 ರೈತರಿಗೆ 103.34 ಕೋಟಿ ರೂಪಾಯಿ ಬೆಳೆ ಸಾಲ ನೀಡಲಾಗಿದೆ. ಇನ್ನು ನಾಗಮಂಗಲದ 17 ಸಹಕಾರ ಸಂಘಗಳ 7496 ರೈತರಿಗೆ 49.56 ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡಲಾಗಿದೆ. ಒಟ್ಟು 650.80 ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡಲಾಗಿದೆ ಮಾಹಿತಿ ನೀಡಿದ್ದಾರೆ.

ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ

ರೈತರು ಸರ್ಕಾರದ ಇಂತಹ ಸೌಕರ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಸೂಕ್ತ ಕಾಲಕ್ಕೆ ಸಾಲವನ್ನು ಪಡೆಯುವುದರ ಜತೆಗೆ ಸಮರ್ಪಕವಾದ ಬೆಳೆಯನ್ನು ಗಳಿಸಿ ಲಾಭದಾಯಕವಾಗಿ ಕೃಷಿಯನ್ನು ಮಾರ್ಪಡಿಸಿಕೊಳ್ಳಬೇಕು. ಅಲ್ಲದೆ, ಸಮಯಕ್ಕೆ ಸರಿಯಾಗಿ ಸಾಲದ ಮರು ಪಾವತಿಯನ್ನೂ ಮಾಡುವ ಮೂಲಕ ಇನ್ನಷ್ಟು ಮಂದಿಗೆ ಸಾಲದ ನೆರವು ಸಿಗಲು ಮಾದರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ಗೋಪಿ, ಮುಖಂಡರಾದ ನಂಜೇಶ್, ಪಾಪಣ್ಣ, ಗೂಳೇಶ್, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!