Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಯಮ ಮತ್ತು ಶಿಸ್ತು ಸಾಧನೆಯ ರಹದ್ದಾರಿ- ಡಾ.ಲೋಕನಾಥ್

ತಾಂತ್ರಿಕ ಪದವಿ ಪಡೆದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿ ಎಂದು ಮೈಸೂರು ವಿವಿ ಉಪಕುಲಪತಿ ಡಾ.ಲೋಕನಾಥ್ ಹೇಳಿದರು.

ಮಂಡ್ಯ ತಾಲ್ಲೂಕಿನ ಸುಂಡಹಳ್ಳಿ ಸಮೀಪವಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕಾವೇರಿ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆ , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವತಿಯಿಂದ 7 ನೇ ಘಟಕೋತ್ಸವ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಬೆ ಇರುತ್ತದೆ, ಪೋಷಕರ ಆಶಯಗಳಗೊಂದಿಗೆ ಹೊಸ ಆಲೋಚನೆಗಳು ಹೊಸ ಅವಿಸ್ಕಾರಕ್ಕೆ ನಾಂದಿಯಾಗಲಿ, ಕೀರ್ತಿ ತರುವಂತ ಸಾಧನೆ ಮಾಡಲು ಸಂಯಮ ಮತ್ತು ಶಿಸ್ತು ಅತ್ಯವಶ್ಯಕ ಎಂದು ನುಡಿದರು.

ಬಳಿಕ ಮಾತನಾಡಿದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪದವಿ ಪಡೆದ ಇಂಜಿನಿಯರ್‌ಗಳು ಉದ್ಯಮಿಗಳಾಗಿ, ಉದ್ಯೋಗದಾತರಾಗಿ, ಸಾಧ್ಯವಾದಷ್ಟು ಸಮಾಜಕ್ಕೆ ನೆರವಾಗಿ ಎಂದು ತಿಳಿಸಿದರು.

ಇಂಜಿನಿಯರ್ ಪದವಿ ಪಡೆದವರು 1 ವರ್ಷ ಕಷ್ಟ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ಐಪಿಎಸ್ ಬರೆದು ಸಾಧಕರಾಗಿ, ಓದಿದ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತೀ ತನ್ನಿ, ಜಿಲ್ಲೆ ನಿಮ್ಮನ್ನು ಸ್ಮರಿಸುವಂತಾ ಸಾಧನೆಗೆ ಹೆಜ್ಜೆ ಹಾಕಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಹೆಚ್.ಪಿ. ರಾಜು, ರವರು ವಹಿಸಿದ್ದರು. ಬಳಿಕ ಗಣ್ಯರು ವಿವಿಧ ವಿಭಾಗಗಳ ಪದವಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಡಾ.ಮಲ್ಲಿಕಾರ್ಜುನ್, ಡಾ.ತಮ್ಮಣ್ಣಗೌಡ, ಪ್ರಾಂಶುಪಾಲ ಶ್ರೀಕಂಠಪ್ಪ , ಉಪಪ್ರಾಂಶುಪಾಲ ಡಾ. ಆರ್. ಮಂಜುನಾಥ್, ಅಧ್ಯಾಪಕರಾದ ಸಿದ್ದರಾಜು, ಸವಿತಾ, ವಿನಯ್ ಕುಮಾರ್, ವಿನೋದ್, ಅಕ್ಷತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!