ಜೆಡಿಎಸ್ ವಿರುದ್ದ ಅಖಾಡಕ್ಕಿಳಿದು ಪಕ್ಷೇತರರಾಗಿ ಸ್ಪರ್ಧಿಸಿ ಸಂಸದೆ ಆದ ಸುಮಲತಾ ಅವರು ಕ್ಷೇತ್ರದ ಸಾಮಾನ್ಯ ಜನರೊಂದಿಗೆ ಬೆರೆಯಲೇ ಇಲ್ಲ.ಸದಾ ಕಾಲ ಜೆಡಿಎಸ್ ಶಾಸಕರ ವಿರುದ್ಧ ಮಾತನಾಡುವುದೇ ಸಾಧನೆ ಎಂದು ಕೊಂಡ ಸುಮಲತಾ ಅವರು ಜಿಲ್ಲೆಯ ಜನರ ಪಲ್ಸ್(ನಾಡಿ ಬಡಿತ) ಅವರಿಗೆ ಅರ್ಥವಾಗಲೇ ಇಲ್ಲ.
ತಮ್ಮ ಗೆಲುವಿಗೆ ಬಹಳಷ್ಟು ಶ್ರಮ ಪಟ್ಟ ಕಾಂಗ್ರೆಸ್ ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ತಳುಕು ಬಳುಕಿಗೆ ಮರುಳಾಗಿ ಬಿಜೆಪಿ ಸೇರಿ ಲೆಕ್ಕಾಚಾರವನ್ನು ಉಲ್ಟಾಪಾಲ್ಟಾ ಮಾಡಿಕೊಂಡರು.
ಇವತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಲೀನ್ ಸ್ವೀಪ್ ಮಾಡಿ, ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಜಿಲ್ಲೆಯ ಎಂಎಲ್ಎಗಳ ಗೆಲುವಿಗೆ ಕಾರಣಕರ್ತರಾಗಬಹುದಾಗಿದ್ದ ಸುವರ್ಣ ಅವಕಾಶವನ್ನು ಸುಮಲತಾ ಅವರು ಕೈಯಾರೇ ಕಳೆದುಕೊಂಡು ಬಿಟ್ಟಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಸುಮಲತಾ ಅವರಿಗೆ ಕಬ್ಬಿಣದ ಕಡಲೆಯಾಗಲಿದೆ.




