Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಾದ್ಯಂತ ಸಹಕಾರ ಸಪ್ತಾಹ ಆಚರಣೆ

ರಾಷ್ಟ್ರೀಯ ಸಹಕಾರ ಯೂನಿಯನ್, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇವರ ಮಾರ್ಗದರ್ಶನದಂತೆ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ.14 ರಿಂದ 20 ರವರೆಗೆ 7 ದಿನಗಳ ಕಾಲ ಮಂಡ್ಯ ಜಿಲ್ಲೆಯಾದ್ಯಂತ ಆಚರಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಂದ್ರಪ್ಪ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಲ್ಲಾ ಸಹಕಾರ ಸಂಘಗಳನ್ನು ಶುಚಿಗೊಳಿಸಿ, ಸಂಘದ ಕಟ್ಟಡದ ಮೇಲೆ 7 ದಿನಗಳ ಕಾಲ ಕಡ್ಡಾಯವಾಗಿ ಸಹಕಾರ ಧ್ವಜವನ್ನು ಹಾರಿಸಿ, ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಲು ಎಲ್ಲಾ ಸಹಕಾರಿ ಬಂಧುಗಳು  ಸಹಕರಿಸಬೇಕೆಂದು ಮನವಿ ಮಾಡಿದರು.

ಜ.14ರಂದು ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ವೃತ್ತ ನಾಚ ಭವನದಲ್ಲಿ, ನ.11ರಂದು ಕೆ.ಆರ್.ಪೇಟೆ ತಾಲ್ಲೂಕಿನ ಶ್ಯಾರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ, ನ.16ರಂದು ನಾಗಮಂಗಲ ತಾಲ್ಲೂಕಿನ ಕಾಳಿಂಗನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಆವರಣ, ನ.17ರಂದು ಮಂಡ್ಯ ತಾಲ್ಲೂಕಿನ ಹೆಮ್ಮಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ವಿವಿಧ ವಿಷಯಗಳಡಿ ಸಪ್ತಾಹ ದಿನಾಚರಣೆ ಮಾಡಲಾಗುವುದು ಎಂದರು.

ನ.18ರಂದು ಶ್ರೀರಂಗಪಟ್ಟಣ ಟಿ.ಎ.ಪಿ.ಸಿ.ಎಂ.ಎಸ್ ಕಲ್ಯಾಣ ಮಂಟಪದಲ್ಲಿ, ನ.19ರಂದು ಮಳವಳ್ಳಿ ಗಾಯತ್ರಿ ಸಭಾಭವನದಲ್ಲಿ ಹಾಗೂ ನ.20ರಂದು ಮದ್ದೂರು ತಾಲ್ಲೂಕಿನ ನೀಲಕಂಠನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸಹ್ತಾಹ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಕ್ರಮ್ ರಾಜೇ ಅರಸ್, ನಾಗೇಂದ್ರ, ಶಿವಕುಮಾರ್, ಮಂಜುನಾಥಗೌಡ, ನಾಗಭೂಷಣ, ಪ್ರಮೋದ್, ಮನುಜ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!