Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಿಲ್ಲಾ ಯುವ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ

ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಎಸ್.ಬಿ.ಎಜುಕೇಶನ್ ಟ್ರಸ್ಟ್ ಮಂಡ್ಯ ಇವರ ಸಹಯೋಗದಲ್ಲಿ ಮಂಡ್ಯದ ನೆಹರುನಗರ ಬಡಾವಣೆಯಲ್ಲಿರುವ ಮಾಂಡವ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾಮಿ ವಿವೇಕಾನಂದರ 116 ನೇ ಜನ್ಮದಿನಾಚರಣೆ, ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರಧಾನ ಹಾಗೂ ಜಿಲ್ಲಾ ಯುವ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಮೀರಾಶಿವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕೃತರಾದ ಕೆ.ಎನ್ ಪದ್ಮಿನಿ ಪ್ರಸನ್ನ ಕುಮಾರ್ ಹೊಸಹೊಳಲು, ನಾಗಮಂಗಲ ತಾಲೂಕಿನ ಬಡಾವಣೆಯ ಎಂ.ಎಂ ಸಚಿನ್ ಕುಮಾರ್, ಮೇಲುಕೋಟೆ ಗ್ರಾಮದ ಕೆ.ಆರ್ ಗಿರೀಶ್, ಶ್ರೀರಂಗಪಟ್ಟಣದ ಹೆಬ್ಬಾಡಿ ಹುಂಡಿ ಗ್ರಾಮದ ಪುಟ್ಟಸ್ವಾಮಿ, ಮಂಡ್ಯ ತಾಲೂಕಿನ ಬೇವಿನಹಳ್ಳಿಯ ಬಿ.ಎಸ್ ಚಂದ್ರಶೇಖರ್, ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಎಂ.ಪಿ ಸೋನು, ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಶೇಖರ್, ಇವರುಗಳನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷರಾದ ಕೆ.ನಾಗಣ್ಣ ಗೌಡರವರು ಅಭಿನಂದಿಸಿದರು.

ಮೈಸೂರು ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಭೀಮರಾಜ್ ಈರೇಗೌಡ ಅವರು ಸ್ವಾಮಿ ವಿವೇಕಾನಂದ ಅವರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಯುವ ಪರಿಷತ್ ನ ನೂತನ ಅಧ್ಯಕ್ಷರಾದ ಕಾರಸವಾಡಿ ಮಹಾದೇವು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಣಿಗ ರವಿಕುಮಾರ್, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತ ಅಧಿಕಾರಿ ಕೆ.ಜೆ ಹನುಮಂತು, ಜಿಲ್ಲಾ ಯುವ ಪರಿಷತ್ತು ನಿಕಟಪೂರ್ವ ಅಧ್ಯಕ್ಷರಾದ ಮಂಗಲ ಎಂ, ಯೋಗೇಶ್, ಪ್ರಧಾನ ಕಾರ್ಯದರ್ಶಿ ಸುಕನ್ಯಾ ರಂಗನಾಥ್, ಕೃಷ್ಣೇಗೌಡ, ತಗಹಳ್ಳಿ ಯಶೋಧ, ಕೀಲಾರ ಸುರೇಶ್, ಲಂಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!