Friday, September 20, 2024

ಪ್ರಾಯೋಗಿಕ ಆವೃತ್ತಿ

ಶಾಲೆಗೆ ದೇಣಿಗೆ ನೀಡಿ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ

ಮಳವಳ್ಳಿ ತಾಲ್ಲೂಕಿನ ರಾಜ ಬೊಪ್ಪೇಗೌಡನಪುರದ ಮಂಟೇಸ್ವಾಮಿ ಮಠದ ಆಡಳಿತಾಧಿಕಾರಿ ಭರತ್‌ರಾಜೇ ಅರಸ್ ಅವರ 38ನೇ ಜನ್ಮದಿನವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ವಿತರಿಸುವುದರ ಜೊತೆಗೆ ಶಾಲೆಗೆ ದೇಣಿಗೆ ನೀಡುವುದರ ಮೂಲಕ ವಿಶೇಷವಾಗಿ ಆಚರಿಸಿಕೊಂಡರು.

ಹೊರ ಮಠದ ಕರಿಬಸವೇಶ್ವರ ಸಮೂಹ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಮಠಾಧಿಪತಿಗಳಾದ ಚಂದ್ರಶೇಖರಸ್ವಾಮಿ ಅವರಿಂದ ಅರ್ಶಿವಾದ ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.

ಬಿಜಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವಶ್ಯಕವಾಗಿ ಬೇಕಾದ ಪೀಠೋಪಕರಣ ಖರೀದಿಗಾಗಿ ಧನ ಸಹಾಯ ಮಾಡಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಶಾಲೆಯ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.

ಹುಟ್ಟುಹಬ್ಬದ ಅಂಗವಾಗಿ ನೂರಾರು ಭಕ್ತರಿಂದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯದ ಸಂಪತ್ತು ಆಗಿರುವುದರಿಂದ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ವಿದ್ಯಾಭ್ಯಾಸವನ್ನು ಪಡೆಯಬೇಕೆಂದು ಕರೆ ನೀಡಿದರು.

ಭಕ್ತರ ಒತ್ತಾಯದ ಮೇರೆಗೆ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಸಿಹಿ ವಿತರಿಸುವುದರ ಜೊತೆಗೆ ಮಠದ ವತಿಯಿಂದ ಪೀಠೋಪಕರಣ ಖರೀದಿಗೆ ದೇಣಿಗೆ ನೀಡಲಾಯಿತು. ಅಭಿಮಾನದಿಂದ ಅಭಿನಂದಿಸಿದ ಮಠದ ಭಕ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗೌಡ್ರು ಮಂಟೇಲಿಂಗಪ್ಪ, ಇತಿಹಾಸ ತಜ್ಞ ನಂಜರಾಜೇ ಅರಸು, ಮುಖಂಡರಾದ ನಿಂಗರಾಜು.ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕಿ ಪುಷ್ಪಲತಾ, ಪರಶಿವಪ್ಪ, ಪೃಥ್ವಿರಾಜ್, ಸೋಮೇಶ್, ಲಿಂಗಾಣಿ, ಪುಟ್ಟಣ್ಣ, ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!