Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಕಲಾಂಗತೆಯಿಂದ ಪಾರು ಮಾಡಲು ಹೊಸ ತಂತ್ರಜ್ಞಾನ : ಡಾ.ಧನಂಜಯ್

ವಿಕಲಚೇತನರಾಗಿ ಹುಟ್ಟುವುದನ್ನು ತಡೆಯುಲು ಮತ್ತು ವಿಕಲಾಂಗತೆಯಿಂದ ಪಾರು ಮಾಡಲು ಹೊಸ ತಂತ್ರಜ್ಞಾನ ಮತ್ತು ತಂತ್ರಗಾರಿಕೆ ಮಂಡ್ಯದಿಂದಲೇ ಆರಂಭಗೊಂಡು ಈಗ ರಾಜ್ಯವ್ಯಾಪ್ತಿ ವಿಸ್ತಾರಗೊಳ್ಳಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್ ತಿಳಿಸಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ವಿಶೇಷ ಚೇತನ ಒಕ್ಕೂಟ, ವಿಶ್ವೇಶ್ವರಯ್ಯ ವಿಕಲಚೇತನರ ಒಕ್ಕೂಟ ಮತು ಎಂ.ಓ.ಬಿ. ಗ್ರಾಮೀಣ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಮಕ್ಕಳಿಗೆ ಕಿವಿಕೇಳಿಸದೇ ಮಾತು ನಿಂತುಹೋಗುವುದನ್ನು ತಡೆಯಲು ಕಿವಿಗೆ ತಂತ್ರಜ್ಞಾನ ಬಳಸಿ ಮಾತು ಕೇಳಿಸುವಂತೆ ಮಾಡಿ, ಮಾತನಾಡಿಸಲು ಪ್ರೇರೇಪಿಸಿದರೆ ಮಗು ಮಾತನಾಡಲು ಪ್ರಾರಂಭಿಸುತ್ತದೆ, ವೈಜ್ಞಾನಿಕ, ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಕಲತೆಯನ್ನು ತಡೆಯಲಾಗುತ್ತಿದೆ ಎಂದು ತಿಳಿಸಿದರು.

nudikarnataka.com

ಸರ್ಕಾರದ ಸೌಲಭ್ಯಗಳು ಅರ್ಹ ವಿಕಲಚೇತನರಿಗೆ ನೇರವಾಗಿ ತಲುಪಲು ಹೊಸ ಯೋಜನೆಗಳು ಜಾರಿಯಾಗಿವೆ, ಸ್ಮಾರ್ಟ್ಕಾರ್ಡ್ ಬಳಕೆ ಅವಶ್ಯ, ಸ್ಥಳೀಯ ಆಸ್ಪತ್ರೆ, ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲಾಗಿದೆ, ಜಿಲ್ಲಾ ಕಚೇರಿ, ಜಿಲ್ಲಾ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ವಿಕಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸ್ವಪ್ರೇರಣೆಯಿಂದ ಸಾಧ್ಯವಾಗಿದೆ, ವೈಜ್ಞಾನಿಕ ವಿಧಾನ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡುವ ಹಂತದಲ್ಲಿ ವಿಕಲಚೇತನರು ವಿಶ್ವಮಟ್ಟದಲ್ಲಿ ಗುರುತು ದಾಖಲಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು. ಇದೇ ಸಂದರ್ಭದಲ್ಲಿ ಅರ್ಹ ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ಗಣ್ಯರು ವಿತರಿಸಿದರು.

ಕಾರ್ಯಕ್ರಮದಲ್ಲಿ ಎ.ಓ.ಬಿ. ಗ್ರಾಮೀಣ ಆರೋಗ್ಯ ಕೇಂದ್ರ ಸಂಸ್ಥಾಪಕಿ ಸಿಸ್ಟರ್ ಲೀಲಾ, ಜಿಲ್ಲಾ ವಿಲಕಚೇತನರ ಇಲಾಖೆ ಅಧಿಕಾರಿ ಪ್ರಭಾಕರ್, ಅಂಗವಿಕಲರದ ಒಕ್ಕೂಟ ಅಧ್ಯಕ್ಷ ಡಾ.ಎಂ.ಎಸ್.ಚಲುವರಾಜು, ಪ್ರೇರಣ ಸಂಸ್ಥೆ ಅಧ್ಯಕ್ಷ ರವಿಕುಮಾರ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನಂಜಮ್ಮಣಿ, ಎ.ಓ.ಬಿ. ಗ್ರಾಮೀಣ ಆರೋಗ್ಯ ಕೇಂದ್ರ ಅಧ್ಯಕ್ಷೆ ಸಿಸ್ಟರ್‌ಜೋಳಿ, ಸಿಸ್ಟರ್ ಪ್ರಿಂಟೋ, ಕಾರ್ಯಕ್ರಮ ವ್ಯವಸ್ಥಾಪಕ ಬಾಲು, ಸಂಯೋಜಕ ದೇವರಾಜು,  ಸಂಚಾಲಕಿ ಅಂಬುಜಾ, ಅಂಬಿಕಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!