ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಚಿಕ್ಕ ತಿಮ್ಮೇಗೌಡ ಮರು ಆಯ್ಕೆಯಾಗಿದ್ದು, ಮಹಿಳಾಧ್ಯಕ್ಷರಾಗಿ ಪದ್ಮ ಹರೀಶ್ ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಾಮನಹಳ್ಳಿ ಸ್ವಾಮಿಗೌಡ ತಿಳಿಸಿದರು.
ಮದ್ದೂರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಅಧಿಕೃತವಾಗಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ನಂತರ ಮಾತನಾಡಿದರು.
ಚಿಕ್ಕ ತಿಮ್ಮೇಗೌಡ ಮಾತನಾಡಿ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷರಾಗಿ ಮದನಾಯಕನಹಳ್ಳಿ ರಾಜಣ್ಣ, ತಾಲೂಕು ಜೆಡಿಎಸ್ ಯುವ ಅಧ್ಯಕ್ಷರಾಗಿ ಪ್ರವೀಣ್ ಆಯ್ಕೆಯಾಗಿದ್ದು, ಯೂತ್ ಕಾರ್ಯಾಧ್ಯಕ್ಷರಾಗಿ ಎನ್.ಡಿ. ಶಿವಚರಣ್ ಆಯ್ಕೆಯಾಗಿದ್ದು, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷರಾಗಿ ಕೊತ್ತನಹಳ್ಳಿ ಕಾಳಯ್ಯ, ಉಪಾಧ್ಯಕ್ಷರಾಗಿ ದೇವರಹಳ್ಳಿ ವೆಂಕಟೇಶ್ ಪುನರ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಬಿಳಿಯಪ್ಪ. ಉಪಾಧ್ಯಕ್ಷರಾಗಿ ಕೂಳಗೆರೆ ಶೇಖರ್, ಗುರುದೇವರಹಳ್ಳಿ ಅರವಿಂದ್, ಸಂದೀಪ್, ಪುರಸಭೆಯ ಉಪಾಧ್ಯಕ್ಷ ಸುನೀತ ರಮೇಶ್, ವನಿತಾ, ಬಸವರಾಜು ಉಪಸ್ಥಿತರಿದ್ದರು.




