Thursday, September 19, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆ | ಮನೆಯಿಂದಲೇ ಮತಚಲಾಯಿಸಲು 3,408 ಮತದಾರರ ಕೋರಿಕೆ

ಮಂಡ್ಯ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,439 ಮತದಾರರು ಇದ್ದು ಈ ಪೈಕಿ 3,408 ಮತದಾರರು ಮನೆಯಲ್ಲಿ ಮತಚಲಾಯಿಸಲು ಮತಪತ್ರ ಕೋರಿದ್ದಾರೆ. ಮನೆ ಮನೆಗೆ ತೆರಳಿ ಮತದಾನ ಮಾಡಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೆಕ್ಟರ್ ವಾರು ತಂಡಗಳನ್ನು ರಚಿಸಿ ಮೇ 3,4,5 ರಂದು ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಅಂಚೆ ಮತಪತ್ರ ಕೋರಿರುವರು ಮೇ 3,4,5 ರಂದೇ ಮತದಾನ ಮಾಡಬೇಕು. ತಪ್ಪಿದಲ್ಲಿ ಮೇ 10 ರಂದು ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದರು.

ಇನ್ನು ಚುನಾವಣೆ ದಿನಾಂಕದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ನಮೂನೆ 12 ರಲ್ಲಿ ಅರ್ಜಿಸಲ್ಲಿಸಿದ್ದು ಅಂತಹ ಮತದಾರರಿಗೆ ಮೇ 2 ರಂದು ಮತದಾನ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕೇಂದ್ರದಲ್ಲಿ ಅಂಚೆ ಮತದಾನ ಸೌಲಭ್ಯ ಕೇಂದ್ರವನ್ನು ತೆರೆಯಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಅಗತ್ಯ ಸೇವೆಯಡಿ ಕಾರ್ಯ ನಿರ್ವಹಿಸುತ್ತಿರುವ 280 ಅರ್ಹ ಮತದಾರರಿಗೆ ಮೇ 2 ರಿಂದ 4 ರವರೆಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಮತದಾನ ಮಾಡಲು ಮತಕೇಂದ್ರವನ್ನು ತೆರೆಯಲಾಗುತ್ತದೆ. ಇದಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಚುನಾವಣಾಧಿಕಾರಿಗಳಿಗೆ ತರಬೇತಿ ಹಾಗೂ ನಿರ್ದೇಶನ ನಿಡಲಾಗಿದೆ ಎಂದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಇ.ವಿ.ಎಂ ಮತಯಂತ್ರಗಳ ರ್ಯಾಂಡಮೈಜೇಷನ್ ಕಾರ್ಯವನ್ನು ಕೈಗೊಂಡ ಮತಗಟ್ಟೆಗಳಿಗೆ ಇ.ವಿ.ಎಂ ಯಂತ್ರಗಳನ್ನು ಹಂಚಿಕೆ ಮಾಡಿ, ಏಪ್ರಿಲ್ 29 ಹಾಗೂ 30 ರಂದು ಮತಯಂತ್ರಗಳಿಗೆ ಮತಪತ್ರಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದರು.

ಮಾನ್ಯತೆ ಪಡೆದ ರಾಷ್ಟ್ರ ಮತ್ತು ರಾಜ್ಯ ಪಕ್ಷದವರಿಂದ ಅಭ್ಯರ್ಥಿಗಳಿಗೆ (ಎ ಮತ್ತು ಬಿ ಫಾರಂ) ಚುನವಣಾ ಆಯೋಗದಿಂದ ಹಂಚಿಕೆಯಾಗಿರುವ ಚಿಹ್ನೆಗಳನ್ನು ನೀಡಲಾಗುತ್ತದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚಿಹ್ನೆಯನ್ನು ಹಂಚಿಕೆ ಮಾಡಲಿದ್ದಾರೆ ಎಂದರು.

ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 29 ರಿಂದ ಏಪ್ರಿಲ್ 24ರವರೆಗೆ ರೂ. 83,28,153 ನಗದು,
ರೂ. 1,07,54,886 ಮೌಲ್ಯದ 50456.65 ಲೀಟರ್ ಮದ್ಯ, ರೂ.55,550 ಮೌಲ್ಯದ 1 ಕೆ.ಜಿ 805 ಗ್ರಾಂ ಡ್ರಗ್ಸ್ ಹಾಗೂ ರೂ. 12,23,170 ಮೌಲ್ಯದ 21,984 ಇನ್ನಿತರ ಪದಾರ್ಥಗಳು ಸೇರಿದಂತೆ ಒಟ್ಟಾರೆ ನಗದು ಹಾಗೂ ವಸ್ತುಗಳ ಮೌಲ್ಯವು ರೂ. 2,03,61,759 ವಶಪಡಿಸಿಕೊಳ್ಳಲಾಗಿದೆ ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಆರಕ್ಷಕ ಇಲಾಖೆಯ 12 ಪ್ರಕರಣ,‌ ಅಬಕಾರಿ ಇಲಾಖೆ 551 ಪ್ರಕರಣ ಈ ಪೈಕಿ 71 ವಾಹನಗಳನ್ನು ಜಪ್ತಿ ಮಾಡಲಾಗಿರುತ್ತದೆ. ಆರ್.ಟಿ.ಓ 425 ಪ್ರಕರಣಗಳಲ್ಲಿ ಎಫ್‍ಐರ್ ದಾಖಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಜ್ ಎಲ್ ನಾಗಾರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಅಬಕಾರಿ ಜಿಲ್ಲಾ ಆಯುಕ್ತರಾದ ಡಾ.ಮಹದೇವಿಬಾಯಿ, ವಾರ್ತಾ  ಇಲಾಖೆ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!