Friday, September 20, 2024

ಪ್ರಾಯೋಗಿಕ ಆವೃತ್ತಿ

ಡಾ.ಹೆಚ್.ಆರ್.ಕನ್ನಿಕಾಗೆ ಪ್ರಶಸ್ತಿ 

ಮಂಡ್ಯ ನಗರದ ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕಿ, ತರಬೇತಿ ಶಿಕ್ಷಕಿ ಹಾಗೂ ಕವಯತ್ರಿ ಡಾ. ಹೆಚ್.ಆರ್.ಕನ್ನಿಕಾ ಅವರು ಮೈಸೂರಿನ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ನೀಡುವ ‘ಶಿಷ್ಯರು ಮೆಚ್ಚಿದ ಗುರು ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟಿನ ಕೋರ್ ಕಮಿಟಿ ಸದಸ್ಯ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.

ಮಕ್ಕಳನ್ನು ಸ್ಪರ್ಧಾತ್ಮಕ‌ ಪರೀಕ್ಷೆಗಳಿಗೆ ತರಬೇತಿಗೊಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ನಿರತರಾಗಿರುವ ಡಾ.ಹೆಚ್.ಆರ್. ಕನ್ನಿಕಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಹ ಹಲವು ಕೃತಿಗಳನ್ನು ಪ್ರಕಟಿಸುವ ಮೂಲಕ ತಮ್ಮ ಸಾಧನೆಯ ಛಾಪು ಮೂಡಿಸಿದ್ದಾರೆ.

ಮಕ್ಕಳ ಸ್ಪರ್ಧಾತ್ಮಕ ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಅ. 16 ರಂದು ಬೆಳಗ್ಗೆ 10-30 ಕ್ಕೆ ಮೈಸೂರಿನ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ, ಕವಯತ್ರಿ ಡಾ. ಕವಿತಾ ರೈ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಲ್. ನಾಗೇಂದ್ರ ಅವರು ಹೆಚ್.ಆರ್. ಕನ್ನಿಕಾರಿಗೆ ಈ ಪ್ರಶಸ್ತಿ ಪ್ರದಾನ ಮಾಡುವರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!