Sunday, May 19, 2024

ಪ್ರಾಯೋಗಿಕ ಆವೃತ್ತಿ

ಸಂಚಲನ ಮೂಡಿಸುತ್ತಿದೆ ಮೆಗಾ ಸರ್ವೆ! ಕಾಂಗ್ರೆಸ್ ಅಧಿಕಾರ ನಿಶ್ಚಿತ ಎಂದಿದೆ ಈ ದಿನ.ಕಾಂ

ಚುನಾವಣಾ ಪೂರ್ವ ಸಮೀಕ್ಷೆ ಮಾಡಿರುವ ಈ ದಿನ.ಕಾಂ ಸುದ್ದಿ ಸಂಸ್ಥೆಯು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದಿದೆ.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಪ್ರತಿಯೊಂದು ಬೂತ್ ನಲ್ಲಿಯೂ ಸುಮಾರು 16 ಕುಟುಂಬದ ಸ್ಥಿತಿಗಳನ್ನು ಅಧ್ಯಯನ ಮಾಡುತ್ತಾ ಅವರ ನಿರ್ಧಾರಕ್ಕೆ ಅನುಗುಣವಾಗಿ ಈ ಚುನಾವಣೆ ಸಮೀಕ್ಷೆಯನ್ನು ನಡೆಸಿದೆ.

ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡಮಟ್ಟದ ಚುನಾವಣಾ ಪೂರ್ವ ಸರ್ವೆ ಇದಾಗಿದ್ದು, ಸುಮಾರು 41,169 ಜನರನ್ನು ಮಾತನಾಡಿಸಿ ಈ ಮೆಗಾ ಸರ್ವೆಯನ್ನು ಜನತೆಯ ಮುಂದಿಟ್ಟಿದೆ. ಒಂದು ಜನಾಂಗದ ಅಥವಾ ಒಂದು ಸಮುದಾಯದ ಆಧಾರದ ಮೇಲೆ ಸರ್ವೆ ನಡೆಸದೇ, ಬೂತ್ ನಲ್ಲಿ ಇರುವ ಮತಪಟ್ಟಿಗಳನ್ನು ಹಿಡಿದು ತಲಾ 12 ಮಂದಿಗಳ ಅನುಸಾರ ಮಾತನಾಡಿಸಿ ಈ ಅಂಕಿಅಂಶಗಳನ್ನು ನೀಡಿದೆ.

ಈದಿನ.ಕಾಂ ಸಮೀಕ್ಷೆ ಪ್ರಕಾರ ವಲಯವಾರು ಸೀಟುಗಳನ್ನು ಹೀಗೆ ನೋಡಬಹುದು.

1 ಹೈದ್ರಬಾದ್ ಕರ್ನಾಟಕ : ಈ ವಲಯದಲ್ಲಿ ಒಟ್ಟು 40 ಕ್ಷೇತ್ರಗಳಿದ್ದು ಕಾಂಗ್ರೆಸ್ 31-37 ಬಿಜೆಪಿ 2-4 ಹಾಗು ಜೆಡಿಎಸ್ 2-4 ಸೀಟುಗಳನ್ನು ಪಡೆಯುವ ನಿರೀಕ್ಷೆಇದೆ

2 ಮುಂಬೈ ಕರ್ನಾಟಕ : ಇಲ್ಲಿ 50 ವಿಧಾನಸಭಾ ಕ್ಷೇತ್ರಗಳಿದ್ದು ಕಾಂಗ್ರೆಸ್ 40-46 ಕ್ಕೂ ಅಧಿಕ ಸೀಟುಗಳನ್ನು ತಮ್ಮದಾಗಿಸಿಕೊಳ್ಳುತ್ತದೆ ಎಂದಿದೆ. ಹಾಗೆಯೇ ಬಿಜೆಪಿ 3-7, ಜೆಡಿಎಸ್ ಗೆ 0-2ಬರುವ ಸಾಧ್ಯತೆ ಇದೆ.

3 ಕರಾವಳಿ ಕರ್ನಾಟಕ: ಬಿಜೆಪಿಗೆ ಏಳುಮಾಡಿಸಿರುವ ಕ್ಷೇತ್ರಗಳಲ್ಲಿ ಈ ಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಲ್ಲಿ ಸುಮಾರು19 ಕ್ಷೇತ್ರಗಳಿವೆ. ಕಾಂಗ್ರೆಸ್ ಗೆ 5-9, ಬಿಜೆಪಿ 10-14 ಜೆಡಿಎಸ್ ಶೂನ್ಯ.

4 ಮದ್ಯ ಕರ್ನಾಟಕ: 26 ಕ್ಷೇತ್ರಗಳಿದ್ದು ಕಾಂಗ್ರೆಸ್ 3-7 ಬಿಜೆಪಿ 19-23 ಜೆಡಿಎಸ್ 0

5 ದಕ್ಷಿಣ ಕರ್ನಾಟಕ: ಇಲ್ಲಿ61 ಅಧಿಕ ಕ್ಷೇತ್ರಗಳಿದ್ದು,ಕಾಂಗ್ರೆಸ್ 26-32 ಬಿಜೆಪಿ 10-14 ಜೆಡಿಎಸ್ 15-19 ಪಡೆಯುವ ನಿರೀಕ್ಷೆ ಇವೆ.

6 ಬೆಂಗಳೂರು ನಗರ: ಈ ವಲಯದಲ್ಲಿ ೨೮ ಕ್ಷೇತ್ರಗಳಿದ್ದು ಕಾಂಗ್ರೆಸ್ 16-20, ಬಿಜೆಪಿ6-10, ಜೆಡಿಎಸ್ 1-3 ಸೀಟುಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ.

ಬಿಜೆಪಿಯು ಕಳೆದ 2018 ರ ಚುನಾವಣೆಗಿಂತ ಈ ಬಾರಿ ಸೀಟುಗಳ ಸಂಖ್ಯೆ ಇಳಿಮುಖವಾಗಲು ಅತಿಯಾದ ಬೆಲೆ ಏರಿಕೆ, ಕೊವೀಡ್ ಇದ್ದ ಕಾಲದಲ್ಲಿ ಜನರನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದು. ಇಂದಿರಾ ಕ್ಯಾಂಟೀನ್ ಮುಚ್ಚುವಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಅಧಿಕ ಮಾಡಿರುವುದು ಹೀಗೆ ಅನೇಕ ಕಾರಣಗಳಿಂದಾಗಿ ಜನ ಬೇಸತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿಕೆ ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!